ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ ಬಳಸಿ ಶೂಮಾಕರ್ ಸಂದರ್ಶನ

Last Updated 20 ಏಪ್ರಿಲ್ 2023, 16:27 IST
ಅಕ್ಷರ ಗಾತ್ರ

ಬರ್ಲಿನ್: ಫಾರ್ಮುಲಾ ಒನ್ ರೇಸ್‌ ದಿಗ್ಗಜ ಮೈಕೆಲ್ ಶೂಮಾಕರ್‌ ಅವರ ಕುಟುಂಬವು ಜರ್ಮನಿಯ ವಾರಪತ್ರಿಕೆಯೊಂದರ ವಿರುದ್ಧ ಕಾನೂನು ಸಮರ ಸಾರಲು ಸಿದ್ಧವಾಗಿದೆ.

ಕೃತಕ ಬುದ್ಧಮತ್ತೆ ತಂತ್ರಜ್ಞಾನವನ್ನು ಬಳಸಿ ಶೂಮಾಕರ್ ಅವರ ನಕಲಿ ಸಂದರ್ಶನ ಪ್ರಕಟಿಸಿದೆ ಎಂದು ಕುಟುಂಬವು ಆರೋಪಿಸಿದೆ.

ನಿಯತಕಾಲಿಕೆಯ ಮುಖಪುಟದಲ್ಲಿ ಶೂಮಾಕರ್ ಅವರ ಚಿತ್ರವನ್ನು ಪ್ರಕಟಿಸಲಾಗಿದ್ದು, ‘ಮೈಕೆಲ್ ಶೂಮಾಕರ್, ದಿ ಫಸ್ಟ್ ಇಂಟರ್ವ್ಯೂವ್’ ಎಂದು ಶೀರ್ಷಿಕೆ ನೀಡಲಾಗಿದೆ.

‘ಜರ್ಮನಿಯ ವಾರಪತ್ರಿಕೆ ಡೈ ಆಕ್ಚುವೆಲ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನಕಲಿ ಸಂದರ್ಶನ ಸಿದ್ಧಗೊಳಿಸಿ ಪ್ರಕಟಿಸಿದೆ. ಅದರ ವಿರುದ್ಧ ಮೊಕದ್ದಮೆ ಹೂಡಲಿದ್ದೇವೆ’ ಎಂದು ಕುಟುಂಬದ ವಕ್ತಾರ ಸಬಿನಾ ಕೆಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT