ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ಸಿಂಧು–ಮಾಳವಿಕಾ ಪೈಪೋಟಿ

ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಆಟಗಾರ್ತಿಯರ ಮುಖಾಮುಖಿ
Last Updated 22 ಜನವರಿ 2022, 17:44 IST
ಅಕ್ಷರ ಗಾತ್ರ

ಲಖನೌ: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗಳಿಸಿರುವ ಭಾರತದ ಪಿ.ವಿ.ಸಿಂಧು ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಐದನೇ ಶ್ರೇಯಾಂಕಿತೆ, ರಷ್ಯಾದ ಎವ್ಜೀನಿಯಾ ಕೊಟೆಸ್ಕಾಯ ಎದುರು ಸಿಂಧು ಮೇಲುಗೈ ಸಾಧಿಸಿದ್ದರು. ಆದರೆ ಪಂದ್ಯದ ಅರ್ಧದಲ್ಲಿ ಎದುರಾಳಿ ನಿವೃತ್ತರಾಗಿ ಮರಳಿದರು.

ಮಹಿಳೆಯರ ವಿಭಾಗದ ಎರಡನೇ ಸೆಮಿಫೈನಲ್‌ನ ಮೊದಲ ಗೇಮ್‌ನಲ್ಲಿ ಸಿಂಧು 21–11ರಲ್ಲಿ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಎದುರಾಳಿ ನಿರ್ಗಮಿಸಿದರು. ಮಾಜಿ ವಿಶ್ವ ಚಾಂಪಿಯನ್ ಸಿಂಧು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತದವರೇ ಆದ ಮಾಳವಿಕಾ ಬಾನ್ಸೋದ್‌ ಅವರನ್ನು ಎದುರಿಸುವರು.

ಭಾರತದ ಅನುಪಮಾ ಉಪಾಧ್ಯಾಯ ಅವರನ್ನು 19-21, 21-19, 21-7ರಲ್ಲಿ ಸೋಲಿಸಿ ಮಾಳವಿಕಾ ಮೊದಲ ಸೆಮಿಫೈನಲ್‌ನಲ್ಲಿ ಸೋಲಿಸಿದರು.

ಸಿಂಧು ಮತ್ತು ಎವ್ಜೀನಿಯಾ ನಡುವಿನ ಹಣಾಹಣಿಯಲ್ಲಿ ಸಿಂಧು ಮೇಲುಗೈ ನಿರೀಕ್ಷಿಸಲಾಗಿತ್ತು. ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು 28ನೇ ಸ್ಥಾನದಲ್ಲಿರುವ ಎವ್ಜೀನಿಯಾ ಅವರನ್ನು ಈ ಹಿಂದೆ ಎರಡು ಬಾರಿ ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT