ನವದೆಹಲಿ:ಭಾರತದ ಗೌರವ್ ಸೋಳಂಕಿ ಮತ್ತು ಮನೀಷ್ ಕೌಶಿಕ್ ಅವರು 36ನೇ ಫೆಲಿಕ್ಸ್ ಸ್ಟಾಮ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದರು.

ಪೋಲೆಂಡ್ನ ವಾರ್ಸಾದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಗೌರವ್ ಸೋಳಂಕಿ 55 ಕೆ.ಜಿ ವಿಭಾಗದಲ್ಲಿ ಇಂಗ್ಲೆಂಡ್ನ ವಿಲಿಯಂ ಕಾಲೇ ಅವರನ್ನು 5–0ರಿಂದ ಸೋಲಿಸಿದರೆ, ಮನೀಷ್ ಕೌಶಿಕ್ 60 ಕೆ.ಜಿ ವಿಭಾಗದಲ್ಲಿ ಮೊರೊಕ್ಕೊದ ಮೊಹಮ್ಮದ್ ಹಾಮೌತ್ ಅವರನ್ನು 4–1ರಿಂದ ಮಣಿಸಿದರು.

23 ವರ್ಷದ ಮನೀಷ್ ಕೌಶಿಕ್, ವೇಗದ ಪಂಚ್ಗಳಿಂದ ಪ್ರಾರಂಭದಲ್ಲಿ ಅಂಕಗಳನ್ನು ಬಾಚಿಕೊಂಡರು. ಇದರಿಂದ ಮೊಹಮ್ಮದ್ ಹಿನ್ನಡೆ ಅನುಭವಿಸಬೇಕಾಯಿತು. ಅಂತಿಮವಾಗಿ ಅವರು 1 ಅಂಕಗಳಿಸಿದರೂ ಸಮಯ ಮೀರಿತ್ತು. ಮನೀಷ್ 4–1ರಿಂದ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು.

ಹಸಮುದ್ದೀನ್ಗೆ ನಿರಾಸೆ: ಭಾರತದ ಬಾಕ್ಸರ್ ಹಸಮುದ್ದೀನ್ 56 ಕೆ.ಜಿ ವಿಭಾಗದಲ್ಲಿ ರಷ್ಯಾದ ಮುಕಾಮ್ಮದ್ ಶೆಕೊವ್ ವಿರುದ್ಧ 1–4ರಿಂದ ಮಣಿದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದು ಈ ವರ್ಷ ಗೆದ್ದ ಅವರ ಎರಡನೇ ಬೆಳ್ಳಿ ಪದಕ. ಇದಕ್ಕೂ ಮೊದಲು
ಗೀ– ಬೀ ಬಾಕ್ಸಿಂಗ್ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.