ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟ: ಶಶಿಕಾಂತ್, ಸಿಮಿ ವೇಗಿಗಳು

Published 3 ಜೂನ್ 2023, 19:36 IST
Last Updated 3 ಜೂನ್ 2023, 19:36 IST
ಅಕ್ಷರ ಗಾತ್ರ

ಬೆಂಗಳೂರು: ವಿ.ಎ. ಶಶಿಕಾಂತ್‌ ಮತ್ತು ಎನ್‌.ಎಸ್. ಸಿಮಿ ಅವರು ಶನಿವಾರ ಇಲ್ಲಿ ಆರಂಭಗೊಂಡ ರಾಜ್ಯ ಸೀನಿಯರ್ ಓಪನ್ ಅಥ್ಲೆಟಿಕ್ ಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 100 ಮೀಟರ್‌ ಓಟದಲ್ಲಿ ಅಗ್ರಸ್ಥಾನ ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದಲ್ಲಿ ಡಿವೈಇಎಸ್‌ನ ಶಶಿಕಾಂತ್‌ 10.5 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಉಡುಪಿಯ ಮಣಿಕಂಠ (10.6 ಸೆ), ವಿಜಯಪುರದ ಎಂ.ಡಿ. ಪೈಗಂಬರ್‌ (10.7 ಸೆ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ‌

ಮಹಿಳೆಯರ ವಿಭಾಗದಲ್ಲಿ ಉತ್ತರ ಕನ್ನಡದ ಸಿಮಿ 11.7 ಸೆಕೆಂಡ್‌ನಲ್ಲಿ ಗುರಿ ತಲುಪಿದರೆ, ಕೆಎಸ್‌ಎಫ್‌ನ ಪಿ.ಜೆ.ಸ್ನೇಹಾ (11.9 ಸೆ), ಬೆಂಗಳೂರು ನಗರದ ಕಾವೇರಿ ಪಾಟೀಲ (12.1 ಸೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಶನಿವಾರ ನಡೆದ ಸ್ಪರ್ಧೆಗಳ ಫಲಿತಾಂಶ:

ಪುರುಷರು: 100 ಮೀ. ಓಟ: ವಿ.ಎ. ಶಶಿಕಾಂತ್‌ (ಡಿವೈಇಎಸ್‌, ಕಾಲ: 10.5 ಸೆಕೆಂಡ್‌)–1, ಮಣಿಕಂಠ (ಉಡುಪಿ)–2, ಎಂ.ಡಿ. ಪೈಗಂಬರ್‌ (ವಿಜಯಪುರ)–3

400 ಮೀ. ಓಟ: ತೀರ್ಥೇಶ್‌ ಶೆಟ್ಟಿ (ದಕ್ಷಿಣ ಕನ್ನಡ, ಕಾಲ: 47.6 ಸೆಂ)–1, ನಿಖಿಲ್‌ (ಉಡುಪಿ)– 2, ಬಾಲಕೃಷ್ಣ (ಹಾಸನ)–3.

1500 ಮೀ. ಓಟ: ನಾಗರಾಜ್‌ ದಿವಟೆ (ಧಾರವಾಡ, ಕಾಲ: 3ನಿ.53.8 ಸೆಂ)–1, ಸೂರ್ಯ (ಡಿವೈಇಎಸ್‌)–2, ಶನಿ ಚೌಧರಿ (ಬೆಂಗಳೂರು ನಗರ)–3

5000‌ ಮೀ. ಓಟ: ವೈಭವ್‌ ಎಂ. ಪಾಟೀಲ (ಬೆಂಗಳೂರು ನಗರ, ಕಾಲ: 15 ನಿ.32.7 ಸೆ)–1, ಅನಂತ್‌ ಬಿ.ಗಾಂವ್ಕರ್‌ (ಬೆಳಗಾವಿ)–2, ನಿತಿನ್‌ ಕುಮಾರ್‌ (ಕೊಡಗು)–3

ಶಾಟ್‌ಪಟ್‌: ಎಸ್‌.ಆರ್‌. ರಾಹುಲ್‌ (ಮಂಡ್ಯ, ದೂರ: 16.98 ಮೀ.)–1, ಬಿ. ಮನುಶ್‌ (ಮೈಸೂರು)–2, ಪ್ರಜ್ವಲ್‌ ಶೆಟ್ಟಿ (ಉಡುಪಿ)–3

ಹೈಜಂಪ್‌: ಜೆಸ್ಸಿ ಸಂದೇಶ್‌ (ಬೆಂಗಳೂರು ನಗರ, ಎತ್ತರ:  2.10 ಮೀ)–1, ಬಿ.ಚೇತನ್‌ (ಏರ್‌ಫೋರ್ಸ್‌)–2, ಎಸ್‌.ಹರ್ಷಿತ್‌ (ಬೆಂಗಳೂರು ನಗರ)–3

ಲಾಂಗ್‌ಜಂಪ್‌: ಸಿದ್ಧಾರ್ಥ್ ನಾಯ್ಕ್‌ (ಏರ್‌ಫೋರ್ಸ್‌, ದೂರ: 7.75 ಮೀ)–1, ಎಸ್‌.ಆರ್ಯ (ಬೆಂಗಳೂರು ನಗರ)–2, ಆರ್‌. ಸಾಜನ್‌ (ಬೆಂಗಳೂರು ನಗರ)– 3

110 ಮೀ ಹರ್ಡಲ್ಸ್‌: ಎಂ.ಡಿ. ಸುಶಾಂತ್‌ (ಶಿವಮೊಗ್ಗ, ಕಾಲ: 14.5 ಸೆ)–1, ಎಂ.ಶ್ರೀಕಾಂತ್‌ (ಉಡುಪಿ)–2, ಆರ್‌. ಶರಣ್‌ (ಬೆಂಗಳೂರು ನಗರ)–3

ಜಾವಲಿನ್‌ ಥ್ರೋ: ವಿಜಯ್‌ (ಬೆಳಗಾವಿ, ದೂರ: 61.46 ಮೀ)–1, ರಾಕೇಶ್‌ (ಹಾಸನ)– 2, ಆದರ್ಶ ನಾಯ್ಕ್‌ (ಉತ್ತರ ಕನ್ನಡ)–3

ಟ್ರಿಪಲ್‌ ಜಂಪ್‌: ಬಿ. ಮಹಾಂತ್‌ (ಮಂಡ್ಯ, ದೂರ: 15.22 ಮೀ)–1, ಕಪಿಲ್‌ ಆನಂದ್‌ (ಎಸ್‌ಡಬ್ಲ್ಯುಆರ್‌ ರೈಲ್ವೆ)–2, ಸಂದೇಶ್‌ ಶೆಟ್ಟಿ (ಆಳ್ವಾಸ್‌)–3

ಡಿಸ್ಕಸ್‌ ಥ್ರೋ: ಮಹಮ್ಮದ್‌ ಸೊಲೈನ್‌ ಅಹಮ್ಮದ್‌ (ಮೈಸೂರು, ದೂರ: 48.10 ಮೀ)–1, ಸ್ಮಿತ್‌ ಜವಿಯಾ (ಮಂಗಳೂರು)– 2, ಎಂ.ಜಿ. ಬಸವರಾಜ್‌ (ಕೆಎಸ್‌ಪಿ)–3

ಮಹಿಳೆಯರು:

100 ಮೀ. ಓಟ: ಎನ್‌.ಎಸ್. ಸಿಮಿ (ಉತ್ತರ ಕನ್ನಡ, ಕಾಲ: 11.7 ಸೆಂ)–1, ಪಿ.ಜೆ.ಸ್ನೇಹಾ (ಕೆಎಸ್‌ಎಫ್‌)–2, ಕಾವೇರಿ ಪಾಟೀಲ (ಬೆಂಗಳೂರು ನಗರ)–3

400 ಮೀ. ಓಟ: ಸಿಂಚಲ್‌ ಕಾವೇರಮ್ಮ (ಬೆಂಗಳೂರು ನಗರ, ಕಾಲ: 54.50 ಸೆಂ)–1, ಇಂಚರಾ (ಬೆಂಗಳೂರು ನಗರ)–2, ಮೇಘಾ ಮುನಹಳ್ಳಿಮಠ (ಧಾರವಾಡ)–3

1500 ಮೀ. ಓಟ: ಡಿ.ಆರ್‌. ಸ್ಮಿತಾ (ಸಾಯಿ ಬೆಂಗಳೂರು, ಕಾಲ: 4ನಿ.34.5 ಸೆ)–1, ಶರಣ್ಯಾ (ಬೆಂಗಳೂರು ನಗರ)–2, ರೇಖಾ ಪಿರೊಜಿ (ಬೆಳಗಾವಿ)–3

5000 ಮೀ. ಓಟ: ಎನ್‌.ಎಲ್‌. ತೇಜಸ್ವಿ (ಬೆಂಗಳೂರು ನಗರ, ಕಾಲ: 19ನಿ,03.4 ಸೆ)–1, ಶಾಹಿನ್‌ ಸಂಶುದ್ದೀನ್‌ (ಧಾರವಾಡ)–2, ಮಲ್ಲೇಶ್ವರಿ ರಾಥೋಡ್‌ (ಮೈಸೂರು)–3

100 ಮೀ. ಹರ್ಡಲ್ಸ್‌: ಮೇಧಾ (ಫ್ಯೂಷನ್‌, ಕಾಲ: 13.6 ಸೆಂ)–1, ಪ್ರತೀಕ್ಷಾ (ಉಡುಪಿ)–2, ದೀಕ್ಷಿತಾ (ಉತ್ತರ ಕನ್ನಡ)–3

ಶಾಟ್‌ಪಟ್‌: ವಿ. ಅಂಬಿಕಾ (ಮೈಸೂರು, ದೂರ: 14.04 ಮೀ)–1, ಟಿ. ನಿವೇತಾ (ಬೆಂಗಳೂರು ನಗರ)–2, ಶಿಲ್ಪಾ (ಕೊಪ್ಪಳ)–3

ಜಾವಲಿನ್‌ ಥ್ರೋ: ಕರೀಷ್ಮಾ (ಉಡುಪಿ, ದೂರ: 43.21 ಮೀ)–1, ಶ್ರಾವ್ಯಾ (ಉಡುಪಿ)–2, ನಿಧಿ (ಉಡುಪಿ)–3

ಟ್ರಿಪಲ್‌ ಜಂಪ್‌: ಜಿ. ಪವಿತ್ರಾ (ಉಡುಪಿ, ದೂರ: 12.76 ಮೀ)–1, ವಿ.ಎಸ್‌. ಶ್ರೀದೇವಿಕಾ (ಉಡುಪಿ)–2, ಕೃತಿ ಶೆಟ್ಟಿ (ದಕ್ಷಿಣ ಕನ್ನಡ)–3

ಡಿಸ್ಕಸ್‌ ಥ್ರೋ: ಕಲಾವತಿ ಬಸಪ್ಪ (ಬೆಳಗಾವಿ, ದೂರ: 42.73 ಮೀ)–1, ಎಂ.ಎನ್‌. ಸುಷ್ಮಾ (ಮೈಸೂರು)–2, ಮಧುರಾ (ಉಡುಪಿ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT