ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ವಿದಿತ್, ತನಿಷಿಗೆ ದಾಖಲೆ ಚಿನ್ನ

ಭುವನೇಶ್ವರದಲ್ಲಿ ರಾಷ್ಟ್ರೀಯ ಸಬ್‌ ಜೂನಿಯರ್, ಜೂನಿಯರ್ ಈಜು
Published 16 ಆಗಸ್ಟ್ 2023, 22:10 IST
Last Updated 16 ಆಗಸ್ಟ್ 2023, 22:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ವಿದಿತ್ ಎಸ್. ಶಂಕರ್ ಮತ್ತು  ತನಿಷಿ ಗುಪ್ತಾ ಅವರು ಭುವನೇಶ್ವರದ ಕಳಿಂಗಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಅಕ್ವಾಟಿಕ್ ಈಜು ಕೇಂದ್ರದಲ್ಲಿ ಬುಧವಾರ ಆರಂಭವಾದ ಸಬ್‌ ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ನೂತನ ದಾಖಲೆ ಬರೆದರು.

ಬಾಲಕರ ಮೊದಲ ಗುಂಪಿನ 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್ 29.40 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲನೇ ಸ್ಥಾನ ಗಳಿಸಿದರು. ನೂತನ ಕೂಟ ದಾಖಲೆ ಕೂಡ ಬರೆದರು. ಬಾಲಕಿಯರ 200 ಮೀ ವೈಯಕ್ತಿಕ ಮೆಡ್ಲೆಯಲ್ಲಿ ತನೀಷಿ ಗುಪ್ತಾ ನೂತನ ದಾಖಲೆ ಬರೆದರು.

ಬಾಲಕರು: ಗುಂಪು 1:  50 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಎಸ್ ಶಂಕರ್ (ಕರ್ನಾಟಕ, ನೂತನ ದಾಖಲೆ 29.40ಸೆ)–1, ರಾಣಾ ಪ್ರತಾಪ್ (ಜಾರ್ಖಂಡ್)–2, ಕೆವಿನ ಜಿನು (ಕೇರಳ)–3. 400 ಮೀ ಫ್ರೀಸ್ಟೈಲ್: ಯುಗ್ ಚೆಲಾನಿ (ರಾಜಸ್ಥಾನ; 4ನಿ, 04.45ಸೆ) –1, ರೋನಕ್ ನಿತಿನ್ ಸಾವಂತ್ (ಮಹಾರಾಷ್ಟ್ರ)–2, ಶಾಶ್ವತ್ ರಾಯ್ (ಬಂಗಾಳ)–3.

100 ಮೀ ಬಟರ್‌ಫ್ಲೈ: ಜ್ಞಾನಂಜಯ್ ಜೆ ಹಜಾರಿಕಾ (ಅಸ್ಸಾಂ; 55.99ಸೆ, ನೂತನ ದಾಖಲೆ)–1, ಕಾರ್ತಿಕೇಯನ್ ನಾಯರ್ (ಕರ್ನಾಟಕ; 56.66ಸೆ) –2, ಪರಾಂಬ್ರತಾ ಬಿಸ್ವಾಸ್ (ಬಂಗಾಳ)–3

ಗುಂಪು 2: 400 ಮೀ ಫ್ರೀಸ್ಟೈಲ್: ಯುವರಾಜ್ ಸಿಂಗ್ (ದೆಹಲಿ; 4ನಿ, 14.29ಸೆ)–1, ಪೃಥ್ವಿರಾಜ್ ಮೆನನ್ (ಕರ್ನಾಟಕ; 4ನಿ, 19.23ಸೆ)–2, ಅಕ್ಷಯ್ ಠಾಕೂರಿಯಾ (ಕರ್ನಾಟಕ; 4ನಿ, 22.12ಸೆ)–3 

100 ಮೀ ಬಟರ್‌ಫ್ಲೈ: ಇಶಾನ್ ಮೆಹ್ರಾ (ಕರ್ನಾಟಕ; 59.14ಸೆ)–1, ಹರಿಜಾರ್ತಿಕ್ ವೇಲು (ಕರ್ನಾಟಕ; 1ನಿ, 01.24ಸೆ)–2, ಮನಶ್ ಪ್ರತಿಮ್ (ಅಸ್ಸಾಂ; 1ನಿ,01.35ಸೆ)–3

ಗುಂಪು 3: 200 ಮೀ ಫ್ರೀಸ್ಟೈಲ್: ಜಸ್ ಸಿಂಗ್ (ಕರ್ನಾಟಕ; 2ನಿ,22.24) –1, ವಿಹಾಂಗ್ ಆಶಿಶ್‌ಕುಮಾರ್ (ಗುಜರಾತ್)–2, ಕಬೀರ್ ಆರ್ಯಮನ್ (ಮಹಾರಾಷ್ಟ್ರ)–3.

100 ಮೀ ಬ್ಯಾಕ್‌ಸ್ಟ್ರೋಕ್: ಕೃಶಿವ್ ದೋಶಿ (ಮಧ್ಯಪ್ರದೇಶ; 1ನಿ, 13. 34)–1, ಎಸ್‌.ಪಿ. ವಿಹಾನ್ (ಗೋವಾ)–2, ಎ.ಪಿ. ಆರ್ಯ (ತಮಿಳುನಾಡು)–3.

ಬಾಲಕಿಯರು: ಗುಂಪು 1: 200 ಮೀ ಐಎಂ: ಮಾನವಿ ವರ್ಮಾ (ಕರ್ನಾಟಕ; 2ನಿ,22.86)–1, ರಾಘವಿ ರಾಮನುಜನ್ (ಮಹಾರಾಷ್ಟ್ರ)–2, ಶುಭ್ರಾಂಶಿನಿ ಪ್ರಿಯದರ್ಶಿನಿ (ಅಸ್ಸಾಂ)–3. 

100 ಮೀ ಬ್ಯಾಕ್‌ಸ್ಟ್ರೋಕ್ ವೈಯಕ್ತಿಕ ಮೆಡ್ಲೆ: ರಿಧಿಮಾ ವೀರೇಂದ್ರ (ಕರ್ನಾಟಕ; 1ನಿ, 05.85ಸೆ)–1, ಶಾಲಿನಿ ಆರ್.ದೀಕ್ಷಿತ್ (ಕರ್ನಾಟಕ; 1ನಿ.06.51)–2, ಸಂಜನಾ ಮಂಗೇಶ್ (ಗೋವಾ)–3. ಗುಂಪು 2: 200 ಮೀ ವೈಯಕ್ತಿಕ ಮೆಡ್ಲೆ : ತನಿಷಿ ಗುಪ್ತಾ (ಕರ್ನಾಟಕ; 2ನಿ.24.83. ನೂತನ ದಾಖಲೆ)–1, ನೈಶಾ (ಕರ್ನಾಟಕ; 2ನಿ, 29.84ಸೆ)–2, ಸಾನ್ವಿ ದೇಶವಾಲ್ (ಮಹಾರಾಷ್ಟ್ರ)–3.

100 ಮೀ ಬ್ಯಾಕ್‌ಸ್ಟ್ರೋಕ್: ನೈಶಾ (ಕರ್ನಾಟಕ; 1ನಿ, 08.10ಸೆ)–1, ತನಿಷಿ ಗುಪ್ತಾ (ಕರ್ನಾಟಕ; 1ನಿ, 08.72ಸೆ)–2, ಶ್ರೀ ನಿತ್ಯಾ (ತೆಲಂಗಾಣ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT