ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯು (ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ-ಸಿಐಪಿಇಟಿ) ಕೈಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಪ್ಲಾಸ್ಟಿಕ್ ಉದ್ಯಮಕ್ಕೆ ಅಗತ್ಯ ಇರುವ ಮಾನವ ಸಂಪನ್ಮೂಲ ಪೂರೈಸಲು ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉಚಿತ 6 ತಿಂಗಳ ಅಲ್ಪಾವಧಿ ವೃತ್ತಿಪರ ತರಬೇತಿ ನೀಡುವ ಯೋಜನೆ ಹಮ್ಮಿಕೊಂಡಿದೆ.

ಕೇಂದ್ರ ಸರ್ಕಾರದ ರಾಸಾಯನಿಕ ಹಾಗೂ ಪೆಟ್ರೋ ರಾಸಾಯನಿಕ ಇಲಾಖೆಯಡಿ ದೇಶದಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ 15 ಕೇಂದ್ರಗಳಲ್ಲಿ ಕರ್ನಾಟಕದ ಏಕೈಕ ಸಂಸ್ಥೆಯಾಗಿರುವ ಮೈಸೂರಿನ ಹೆಬ್ಬಾಳ ಕೈಗಾರಿಕ ವಲಯದಲ್ಲಿರುವ `ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆ~ಯು ಒಂದಾಗಿದೆ.

ಬದುಕಿನ ಅವಿಭಾಜ್ಯ ಅಂಗವಾಗಿರುವ ಪ್ಲಾಸ್ಟಿಕ್ ತಯಾರಿಕೆ ಒಂದು ವಿಶಿಷ್ಟ ತಂತ್ರಜ್ಞಾನವಾಗಿದೆ. ಇದರ ಕಲಿಕೆಗೆ ಪರಿಣಿತಿ ಅವಶ್ಯಕ. ಪ್ಲಾಸ್ಟಿಕ್ ಉದ್ಯಮ ಹಾಗೂ ಉತ್ಪಾದನಾ ಘಟಕಗಳಿಗೆ ಬೇಕಾದ ಉತ್ಪಾದನಾ ತಂತ್ರಜ್ಞಾನ, ಉಪಕರಣಾಗಾರ, ವಿನ್ಯಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬೇಕಾಗುವ ಪರಿಣತರನ್ನು ಸಂಸ್ಥೆಯು 6 ತಿಂಗಳಲ್ಲಿ ತರಬೇತುಗೊಳಿಸುತ್ತದೆ. ಇದರೊಂದಿಗೆ ಇಂಗ್ಲಿಷ್ ಸಂವಹನ ತರಬೇತಿ ಮತ್ತು ಕಂಪ್ಯೂಟರ್ ಬೇಸಿಕ್ ಹೇಳಿಕೊಡಲಾಗುತ್ತದೆ.

ತರಬೇತಿ ವಿವರಗಳು
* ಪ್ಲಾಸ್ಟಿಕ್ ಪ್ರೊಸೆಸಿಂಗ್ ಮೆಷಿನ್ ಆಪರೇಷನ್ (ಪಿಪಿಎಂಒ)
*  ಇಂಜಕ್ಷನ್ ಮೋಲ್ಡಿಂಗ್ ಮೆಷಿನ್ ಆಪರೇಷನ್ ಅಂಡ್ ಮೆಂಟೆನೆನ್ಸ್ (ಐಎಂಎಂಒ
ಅಂಡ್ ಎಂ)
*  ಕ್ಯಾಡ್/ ಕ್ಯಾಮ್/ಸಿಎಇ ಅಪ್ಲಿಕೇಷನ್ ಇನ್ ಪ್ಲಾಸ್ಟಿಕ್ ಪ್ರೋಡಕ್ಟ್ ಅಂಡ್ ಮೋಲ್ಡ್ ಡಿಸೈನ್
*  ಸಿಎನ್‌ಸಿ ಮೆಷಿನ್ ಪ್ರೋಗ್ರಾಮಿಂಗ್ ಅಂಡ್ ಆಪರೇಷನ್ಸ್
*  ಪ್ಲಾಸ್ಟಿಕ್ಸ್ ಮೋಲ್ಡ್ ಮೇಕಿಂಗ್ ಟೆಕ್ನಾಲಜಿ (ಎಂಎಂಟಿ)

ಈ ತರಬೇತಿಗಳನ್ನು ಹೊಂದಲು ಅಭ್ಯರ್ಥಿಗಳು ವಿವಿಧ ವಿದ್ಯಾರ್ಹತೆ ಹೊಂದಬೇಕಾಗಿರುತ್ತದೆ. ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಬಿ.ಇ ಅಥವಾ ತತ್ಸಮಾನ ಯಾವುದೇ ವಿಭಾಗ (ಮೆಕಾನಿಕ್, ಆಟೋಮೊಬೈಲ್, ಪಾಲಿಮರ್, ಟೂಲಿಂಗ್ ಮತ್ತು ಇಂಡಸ್ಟ್ರಿಯಲ್ ಪ್ರೊಡಕ್ಷನ್) ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿಗಳನ್ನು ನೀಡಲಾಗುತ್ತದೆ.

ಸರ್ಕಾರದ ಆದೇಶದ ಅನುಗುಣವಾಗಿ ಹಾಗೂ ವಿವಿಧ ಇಲಾಖೆಗಳ ಉದ್ದೇಶಕ್ಕೆ ಅನುಗುಣವಾಗಿ ಅಲ್ಪಸಂಖ್ಯಾತ ವರ್ಗ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ ಇತರ ಬ್ಯಾಚ್‌ಗಳಲ್ಲಿ ತರಬೇತಿಯ ಅವಕಾಶ ಕಲ್ಪಿಸಲಾಗಿದೆ.

ಮೈಸೂರಿನ ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯು ದೇಶ ಹಾಗೂ ಕರ್ನಾಟಕದಲ್ಲಿ ವಿವಿಧ ಬೃಹತ್ ಮತ್ತು ಮಧ್ಯಮ ಪ್ರಮಾಣದ ಪ್ಲಾಸ್ಟಿಕ್ ಉದ್ಯಮಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.

ಕ್ಯಾಂಪಸ್ ಇಂಟರ್‌ವ್ಯೆ ಮೂಲಕ ವಿವಿಧ ಉದ್ಯಮಗಳಿಗೆ ಬೇಕಾದ ಪರಿಣತರನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲಿದೆ. ಪಾಂಟೇಕ್ ಪೆನ್ ಪ್ರೈ.ಲಿ., ಪ್ರಶಾಂತಿ ಪಾಲಿಮರ್ಸ್, ಲಕ್ಷ್ಮಿ ಡಿಸೈನರ್, ಮದರ್ ಸನ್, ಪ್ರೀಟೆಕ್, ಒಮಿನಿ ಮ್ಯಾಟ್ರಿಕ್ಸ್ ಇಂಡಿಯಾ, ಎಂಜಿನಿಯರ್ ಪ್ಲಾಸ್ಟಿಕ್, ಸುಪ್ರೀಂ ಇಂಡಸ್ಟ್ರೀಸ್, ಜಿ.ಇ.ಪ್ಲಾಸ್ಟಿಕ್, ಸಿಂಟಿಕ್ಸ್ ಕಂಪೆನಿ, ತ್ರಿಮೂರ್ತಿ ಗ್ರೂಪ್ಸ್ ಸೇರಿದಂತೆ ಹಲವಾರು ಕಂಪೆನಿಗಳಲ್ಲಿ ಈಗಾಲೇ ಅನೇಕ ಮಂದಿ ಉದ್ಯೋಗ ಪಡೆದಿದ್ದಾರೆ. ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳನ್ನು ಹೊಂದಲು ಖಾಸಗಿ ಪ್ಲಾಸ್ಟಿಕ್ ಉದ್ಯಮಿಗಳು ಪೈಪೋಟಿ ನಡೆಸುವುದು ವಿಶಿಷ್ಟವಾಗಿದೆ.

ಎಸ್‌ಎಸ್‌ಎಲ್‌ಸಿ ತೇರ್ಗಡೆ ನಂತರ ಯಾವುದೇ ವಿದ್ಯಾರ್ಹತೆಯನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಅಭ್ಯರ್ಥಿಯು 18ರಿಂದ 35ವರ್ಷ ವಯೋಮಿತಿ ಹೊಂದಿರಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದವರಾಗಿದ್ದು, 1.40 ಲಕ್ಷದೊಳಗೆ ವಾರ್ಷಿಕ ಆದಾಯ ಮಿತಿ ಹೊಂದಿರಬೇಕು.

ಈ ಬಾರಿಯ 6 ತಿಂಗಳ ತರಬೇತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ. ನಂತರ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ಕಡ್ಡಾಯ ಹಾಜರಾತಿ ಕಲಿಕೆಯ ಮೂಲಕ ಪರಿಣಿತ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾರ್ಪಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಫೋಟೊ ಲಗತ್ತಿಸಿ, ಸ್ವ-ವಿವರ (ಬಯೋಡೇಟಾ), ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ದಾಖಲಾತಿಗಳ ನಕಲು ಪ್ರತಿಯನ್ನು ಉಪನಿರ್ದೇಶಕರು, ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ನಂ.437/ಎ, ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ, ಮೈಸೂರು-16 ವಿಳಾಸಕ್ಕೆ ಸೆಪ್ಟೆಂಬರ್ 9ರ ಒಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 9448593895, 9480748177 .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.