ಮಂಗಳವಾರ, ಸೆಪ್ಟೆಂಬರ್ 22, 2020
26 °C

ಎಸ್ಟ್ರೆಲ್ಲಾ ಮೆಡಿಟರೇನಿಯನ್‌ ಓಪನ್‌ ಗಾಲ್ಫ್‌: ಅದಿತಿಗೆ ಎಂಟನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾರ್ಸಿಲೋನ: ಉತ್ತಮ ಪ್ರದರ್ಶನ ತೋರಿದ ಭಾರತದ ಅದಿತಿ ಅಶೋಕ್‌ ಇಲ್ಲಿ ನಡೆದ ಎಸ್ಟ್ರೆಲ್ಲಾ ಮೆಡಿಟರೇನಿಯನ್‌ ಓಪನ್‌ ಗಾಲ್ಫ್‌ ಟೂರ್ನಿಯಲ್ಲಿ 8ನೇ ಸ್ಥಾನ ಗಳಿಸಿದರು. ಸತತ ಎರಡನೇ ವರ್ಷ ಅವರು ಅಗ್ರ 10ರೊಳಗೆ ಸ್ಥಾನ ಪಡೆದರು.

ಬೆಂಗಳೂರಿನ 21 ವರ್ಷದ ಅದಿತಿ ಒಟ್ಟು 284 ಪಾಯಿಂಟ್ಸ್‌ ಗಳಿಸಿದರು. ತ್ವೇಷಾ ಮಲಿಕ್‌ 35ನೇ ಸ್ಥಾನ ಗಳಿಸಿದರೆ, ದೀಕ್ಷಾ ದಾಗರ್‌ 49ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಸ್ಪೇನ್‌ನ ಕಾರ್ಲೊಟಾ ಸಿಗಾಂಡಾ ಎಸ್ಟ್ರೆಲ್ಲಾ ಮೆಡಿಟರೇನಿಯನ್‌ ಓಪನ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು