ಭಾನುವಾರ, ಮಾರ್ಚ್ 7, 2021
18 °C
ದುಬೈ ಅಂತರರಾಷ್ಟ್ರೀಯ ಮೋಟರ್ ಸ್ಪರ್ಧೆ

ಐಶ್ವರ್ಯಗೆ ಮೂರನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಕರ್ನಾಟಕದ ಐಶ್ವರ್ಯ ಪಿಸ್ಸೆ ಅವರು ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಬಾಜಾ ಮೋಟರ್‌ ರೇಸ್‌ನ ವಿಮೆನ್ಸ್ ಕ್ಲಾಸ್ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಟಿವಿಎಸ್ ರೇಸಿಂಗ್ ತಂಡದ ಚಾಲಕಿ, 2021ರ ಋತುವಿನಲ್ಲಿ ಶುಭಾರಂಭ ಮಾಡಿದರು.

25 ವರ್ಷದ ಐಶ್ವರ್ಯ, ಹೋದ ವರ್ಷ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್‌ನ ವಿಮೆನ್ಸ್ ಕ್ಲಾಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ದುಬೈನಲ್ಲಿ ಸಕಾರಾತ್ಮಕ ಮನೋಭಾವದೊಂದಿಗೆ ರೇಸ್ ಆರಂಭಿಸಿದ ಅವರು, ಅಲ್‌ ಖುದ್ರಾ ಮರುಭೂಮಿಯ ಸವಾಲಿನ ಟ್ರ್ಯಾಕ್‌ನಲ್ಲಿ ಗಮನ ಸೆಳೆದರು.

‘ಈ ರೇಸ್ ಸವಾಲಿನದ್ದಾಗಿತ್ತು. ಮೂರನೇ ಸ್ಥಾನ ಗಳಿಸಿದ್ದು ಖುಷಿಯ ಸಂಗತಿ. ಮುಂಬರುವ ರೇಸ್‌ಗಳಿಗೆ ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಲಿದೆ‘ ಎಂದು ಐಶ್ವರ್ಯ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು