ಬುಧವಾರ, ಜನವರಿ 20, 2021
20 °C

ಗಾಲ್ಫ್: ಅಕ್ಷಯ್, ಸಾನ್ವಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ಅಕ್ಷಯ್ ನಿರಂಜನ್ ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಆರ್‌ಬಿಜಿ ದಕ್ಷಿಣ ವಲಯ ಗಾಲ್ಫ್ ಟೂರ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈಗಲ್ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಸಂಜೆ ಅಗ್ರಸ್ಥಾನಗಳನ್ನು ಹಂಚಿಕೊಂಡಿದ್ದ ನಾಲ್ವರ ಪೈಕಿ ಅಕ್ಷಯ್ ಮತ್ತು ವೃಷಾಂಕ್ ನಡುವಿನ ಹಣಾಹಣಿ ಟೈ ಆಗಿತ್ತು. ಹೀಗಾಗಿ ಪ್ಲೇ ಆಫ್‌ ಮೂಲಕ ವಿಜೇತರನ್ನು ಆರಿಸಲಾಯಿತು.

ಆರಂಭದಿಂದಲೇ ಮುನ್ನಡೆ ಸಾಧಿಸಿದ್ದ ಹೃದಿಕಾ ವೊಹ್ರಾ ಮಹಿಳಾ ವಿಭಾಗದ ಮತ್ತು ಬಾಲಕಿಯರ ಟೀನ್ ‘ಎ’ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಶ್ರೀಹಿತಾ ಅವರ ‍ಪೈ‍ಪೋಟಿಯನ್ನು ಮೆಟ್ಟಿನಿಂತ ಸಾನ್ವಿ ಸೋಮು ಅವರು ಬಾಲಕಿಯರ ಟೀನ್ ‘ಬಿ’ ವಿಭಾಗದಲ್ಲಿ ಗೆಲುವು ಸಾಧಿಸಿದರು. ಈ ವಿಭಾಗದ ವಿಜೇತರನ್ನು ಕೂಡ ಪ್ಲೇ ಆಫ್ ಮೂಲಕ ನಿರ್ಧರಿಸಲಾಗಿತ್ತು. ಬಾಲಕರ ಟೀನ್ ‘ಬಿ’ ವಿಭಾಗದ ಪ್ರಶಸ್ತಿ ವೀರ್ ಗಣಪತಿ ಅವರ ಮುಡಿ ಏರಿತು. ಅವರು ಮಹಿರ್ ರಖ್ರಾ ವಿರುದ್ಧ ಗೆದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು