ಶುಕ್ರವಾರ, ಮೇ 20, 2022
20 °C
ಅಖಿಲ ಭಾರತ ಜೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ

ಆಯುಷ್, ಉನ್ನತಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಯುಷ್ ಶೆಟ್ಟಿ ಮತ್ತು ಉನ್ನತಿ ಹೂಡಾ ಅವರು ಅಖಿಲ ಭಾರತ ಜೂನಿಯರ್ (19 ವರ್ಷದೊಳಗಿನವರ) ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಇಲ್ಲಿಯ ದ್ರಾವಿಡ್‌– ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಫೈನಲ್‌ನಲ್ಲಿ ಶುಕ್ರವಾರ ಆಯುಷ್‌ 21-14, 21-16ರಿಂದ ದರ್ಶನ್ ಪೂಜಾರಿ ಅವರನ್ನು ಮಣಿಸಿದರು.

ಉನ್ನತಿ ಹೂಡಾ ಅವರಿಗೆ ಫೈನಲ್‌ನಲ್ಲಿ ರಕ್ಷಿತಾಶ್ರೀ ಎಸ್. ವಿರುದ್ಧ ವಾಕ್‌ಓವರ್ ಲಭಿಸಿತು.

ಬಾಲಕರ ಡಬಲ್ಸ್‌ನಲ್ಲಿ ದರ್ಶನ್ ಪೂಜಾರಿ ಮತ್ತು ಅಭಿನವ್ ಠಾಕೂರ್ ಅವರಿಗೆ ಪ್ರಶಸ್ತಿ ಒಲಿಯಿತು. ಈ ಜೋಡಿಯು ಫೈನಲ್‌ನಲ್ಲಿ 21–19, 18–21, 21–19ರಿಂದ ನಿಕೋಲಸ್‌ ನಥನ್ ರಾಜ್‌– ತುಷಾರ್‌ ಸುವೀರ್‌ ವಿರುದ್ಧ ಗೆದ್ದರು.

ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ವೆನ್ನಲಾ ಕೆ.– ಶ್ರೀಯಾಂಶಿ ವಾಲಿಶೆಟ್ಟಿ 12-21, 21-19, 21-14ರಿಂದ ಜ್ಞಾನಧಾ ಕಾರ್ತಿಕೇಯನ್‌– ಸಾನಿಯಾ ಸಿಕಂದರ್‌ ವಿರುದ್ಧ ಜಯಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಮಯಂಕ್ ರಾಣಾ– ನರ್ತನಾ ವಿ.ಆರ್‌. 21-17, 21-10ರಿಂದ ಸಮರವೀರ್ ಮತ್ತು ರಾಧಿಕಾ ಶರ್ಮಾ ಅವರನ್ನು ಮಣಿಸಿ ಚಾಂಪಿಯನ್ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು