ಬೆಂಗಳೂರು: ಎಂ. ಮಿಥುನ್ ಮತ್ತು ಆಕರ್ಷಿ ಕಶ್ಯಪ್ ಅವರು ಅಖಿಲ ಭಾರತ ಸೀನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಕೇಂದ್ರದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ 15ನೇ ಶ್ರೇಯಾಂಕದ ಆಟಗಾರ ಮಿಥುನ್ 21–17, 21–9 ನೇರ ಗೇಮ್ಗಳಿಂದ 12ನೇ ಶ್ರೇಯಾಂಕದ ಆಟಗಾರ ಕೌಶಲ್ ಧರ್ಮಾಮರ್ಗೆ ಆಘಾತ ನೀಡಿದರು.

ಪ್ರಶಸ್ತಿ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಆಕರ್ಷಿ 21–17, 12–21, 21–9ರಲ್ಲಿ 16ನೇ ಶ್ರೇಯಾಂಕದ ಆಟಗಾರ್ತಿ ಗಾಯತ್ರಿ ಪುಲ್ಲೇಲಾ ಗೋಪಿಚಂದ್ ವಿರುದ್ಧ ಗೆದ್ದರು.

ಪುರುಷರ ಡಬಲ್ಸ್ನಲ್ಲಿ ಉತ್ಕರ್ಷ್ ಅರೋರಾ ಮತ್ತು ಸೌರಭ್ ಶರ್ಮಾ ಜೋಡಿ ಚಾಂಪಿಯನ್ ಆಯಿತು.

ಫೈನಲ್ನಲ್ಲಿ ಉತ್ಕರ್ಷ್ ಮತ್ತು ಸೌರಭ್ 14–21, 21–9, 21–16ರಲ್ಲಿ ಜಿ.ಕೃಷ್ಣಪ್ರಸಾದ್ ಮತ್ತು ಶ್ಲೋಕ್ ರಾಮಚಂದ್ರನ್ ಅವರನ್ನು ಸೋಲಿಸಿದರು.

ಮಹಿಳಾ ಡಬಲ್ಸ್ ಫೈನಲ್ನಲ್ಲಿ ಕೆ.ಮನೀಷಾ ಮತ್ತು ಋತುಪರ್ಣ ಪಾಂಡಾ 21–19, 21–7ರಲ್ಲಿ ಕರ್ನಾಟಕದ ಕೆ.ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್ ವಿರುದ್ಧ ಗೆದ್ದು ಪ್ರಶಸ್ತಿ ಪಡೆಯಿತು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಎಂ.ಆರ್.ಅರ್ಜುನ್ ಮತ್ತು ಕೆ.ಮನೀಷಾ ಅವರು ಟ್ರೋಫಿ ಜಯಿಸಿದರು.

ಫೈನಲ್ನಲ್ಲಿ ಅರ್ಜುನ್ ಮತ್ತು ಮನೀಷಾ 17–21, 21–13, 21–11ರಲ್ಲಿ ಡಿಂಕು ಸಿಂಗ್ ಮತ್ತು ರಿತಿಕಾ ಥಾಕರ್ ಅವರನ್ನು ಪರಾಭವಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.