ಬುಧವಾರ, ನವೆಂಬರ್ 30, 2022
17 °C

ಆಳ್ವಾಸ್‍ಗೆ ರಂಗಸ್ವಾಮಿ ಸ್ಮಾರಕ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ರಂಗಸ್ವಾಮಿ ಸ್ಮರಣಾರ್ಥ ರಾಜ್ಯ ಮಟ್ಟದ ಬಾಲ್‍ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಹಾಸನಾಂಬ ಬಾಲ್‍ ಬ್ಯಾಡ್ಮಿಂಟನ್ ಕ್ಲಬ್ ಸಹಯೋಗದಲ್ಲಿ ಹಾಸನದಲ್ಲಿ ಆುಯೋಜಿಸಿದ್ದ ಹೊನಲು ಬೆಳಕಿನ ಚಾಂಪಿಯನ್‍ಷಿಪ್‍ನ ಫೈನಲ್ಸ್‍ನಲ್ಲಿ ಆಳ್ವಾಸ್ ತಂಡ ಆತಿಥೇಯ ಹಾಸನಾಂಬ ಕ್ಲಬ್ ತಂಡವನ್ನು 35-22, 35-29ರಲ್ಲಿ ಮಣಿಸಿತು.

ಸೆಮಿಫೈನಲ್‌ನಲ್ಲಿ ಬೆಂಗಳೂರಿನ ವಿಜಯನಗರ ತಂಡವನ್ನು ಆಳ್ವಾಸ್‌ 35-22, 35-18 ಸೆಟ್‍ಗಳಿಂದ ಸೋಲಿಸಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಹಾಸನಾಂಬಕ್ಲಬ್ ಬೆಂಗಳೂರಿನ ಸಹ್ಯಾದ್ರಿ ಸ್ಪೋರ್ಟ್ಸ್‌ ಕ್ಲಬ್ ತಂಡವನ್ನು 35-25, 32-35, 35-32ರಲ್ಲಿ ಸೋಲಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ತುಮಕೂರಿನ ಗಾಂಧಿನಗರ ಕ್ಲಬ್ ತಂಡವನ್ನು 35-19, 35-24ರಲ್ಲಿ ಮಣಿಸಿತ್ತು. ವಿಜಯನಗರ ಬಾಲ್‍ ಬ್ಯಾಡ್ಮಿಂಟನ್ ಕ್ಲಬ್ ಮೂರನೆ ಸ್ಥಾನ ಮತ್ತು ಸಹ್ಯಾದ್ರಿ ಬಾಲ್‍ ಬ್ಯಾಡ್ಮಿಂಟನ್ ಕ್ಲಬ್ ನಾಲ್ಕನೇ ಸ್ಥಾನ ಗಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು