ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್ ಸ್ಕ್ವಾಷ್‌: ಕ್ವಾರ್ಟರ್‌ಫೈನಲ್‌ಗೆ ಅನಾಹತ್‌

Last Updated 14 ಆಗಸ್ಟ್ 2022, 10:20 IST
ಅಕ್ಷರ ಗಾತ್ರ

ನ್ಯಾನ್ಸಿ, ಫ್ರಾನ್ಸ್: ಭಾರತದ ಭರವಸೆಯ ಆಟಗಾರ್ತಿ ಅನಾಹತ್ ಸಿಂಗ್ ಅವರು ವಿಶ್ವ ಜೂನಿಯರ್‌ ಸ್ಕ್ವಾಷ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ಮಹಿಳಾ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು 3–1ರಿಂದ ಇಂಗ್ಲೆಂಡ್‌ನ ಟೋರಿ ಮಲಿಕ್ ಎದುರು ಗೆದ್ದರು.

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ್ದ ಅನಾಹತ್‌, 11-5, 11-5, 6-1, 11-7ರಿಂದ ಇಂಗ್ಲೆಂಡ್ ಆಟಗಾರ್ತಿಗೆ ಸೋಲುಣಿಸಿದರು.

ಎಂಟರಘಟ್ಟದ ಪಂದ್ಯದಲ್ಲಿ ಅನಾಹತ್‌ ಅವರು ಈಜಿಪ್ಟ್‌ನ ಫಯರೌಜ್‌ ಅಬೋಲ್ಕಿಯರ್‌ ವಿರುದ್ಧ ಆಡುವರು.

‘ಇಂಥಹ ಆಟ ನಿರೀಕ್ಷಿಸಿರಲಿಲ್ಲ. ಒತ್ತಡಕ್ಕೆ ಒಳಗಾಗಲಿಲ್ಲವಾದ್ದರಿಂದ ಗೆಲುವು ಸಾಧ್ಯವಾಯಿತು‘ ಎಂದು ಪಂದ್ಯದ ಬಳಿಕ ಅನಾಹತ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT