ನವದೆಹಲಿ: ಎದುರಾಳಿಯನ್ನು ಏಕಪಕ್ಷೀಯವಾಗಿ ಮಣಿಸಿದ ಭಾರತದ ಅನಾಮಿಕ, ಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 50 ಕೆಜಿ ವಿಭಾಗದ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರದ ಬೌಟ್‌ನಲ್ಲಿ ಅವರು ರೊಮೇನಿಯಾದ ಯೂಜಿನಿಯಾ ಏಂಜೆಲ್ ವಿರುದ್ಧ ಜಯ ಗಳಿಸಿದರು.

ಇಬ್ಬರೂ ಜಿದ್ದಾಜಿದ್ದಿಯ ಕಾದಾಟಕ್ಕೆ ಮುಂದಾಗುವುದರ ಮೂಲಕ ಆರಂಭದಲ್ಲಿ ಬೌಟ್ ರೋಚಕವಾಗಿತ್ತು. ಆಕ್ರಮಣಕಾರಿ ಆಟವಾಡಿದ ಇಬ್ಬರೂ ಭರ್ಜರಿ ಪಂಚ್‌ಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಲು ಪ್ರಯತ್ನಿಸಿದರು. ನಿಧಾನಕ್ಕೆ ಆಧಿಪತ್ಯ ಸ್ಥಾಪಿಸಿದ ಅನಾಮಿಕ ಚುರುಕಿನ ಪಾದಚಲನೆ ಮೂಲಕ ಗಮನ ಸೆಳೆದರು. ಪರಿಣಾಮಕಾರಿ ಪಂಚ್‌ಗಳು ಅವರಿಂದ ಮೂಡಿಬಂದವು.

ರೋಹ್ಟಕ್‌ನ ಬಾಕ್ಸರ್ ಅನಾಮಿಕ ಎರಡನೇ ಸುತ್ತಿನಲ್ಲಿ ಭಾರಿ ಆಕ್ರಮಣಕ್ಕೆ ಮುಂದಾದರು. ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡದ ಅವರು ಮುಂದಿನ ಹಂತದಲ್ಲೂ ಮಿಂಚಿದರು. ಹೀಗಾಗಿ 5–0ಯಿಂದ ಜಯ ಗಳಿಸಲು ಸಾಧ್ಯವಾಯಿತು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಸ್ಟ್ರೇಲಿಯಾದ ಕ್ರಿಸ್ಟಿ ಲೀ ಹ್ಯಾರಿಸ್ ವಿರುದ್ಧ ಅನಾಮಿಕ 16ರ ಘಟ್ಟದಲ್ಲಿ ಸೆಣಸುವರು.

ಬುಧವಾರ ತಡರಾತ್ರಿ ನಡೆದ 75 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸ್ವೀಟಿ, ಇಂಗ್ಲೆಂಡ್‌ನ ಕೇರಿ ಡೇವಿಸ್ ವಿರುದ್ಧ 2–3ರಲ್ಲಿ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.