ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜೂನಿಯರ್ ಕುಸ್ತಿ: ಅಂತಿಮ್‌ ಪಂಘಾಲ್‌ಗೆ ಚಾರಿತ್ರಿಕ ಚಿನ್ನ

ಅಗ್ರಸ್ಥಾನ ಗಳಿಸಿದ ಭಾರತದ ಮೊದಲ ಮಹಿಳೆ
Last Updated 20 ಆಗಸ್ಟ್ 2022, 19:39 IST
ಅಕ್ಷರ ಗಾತ್ರ

ನವದೆಹಲಿ:ಭಾರತದ ಅಂತಿಮ್ ಪಂಘಾಲ್ ಅವರು ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್‌ ಕುಸ್ತಿಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಐತಿಹಾಸಿಕ ಸಾಧನೆ ಮಾಡಿದ್ದಾರೆ.

20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಶ್ರೇಯವನ್ನು ಅವರು ಗಳಿಸಿದ್ದಾರೆ.

53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದಅಂತಿಮ್, ಫೈನಲ್‌ ಬೌಟ್‌ನಲ್ಲಿ 8-0ಯಿಂದ ಕಜಕಸ್ತಾನದ ಅಟ್ಲಿನ್‌ಶಗಾಯೆವಾ ವಿರುದ್ಧ ಗೆಲುವು ಸಾಧಿಸಿದರು. ಈ ವಿಭಾಗದ ಕಂಚಿನ ಪದಕವು ಅಮೆರಿಕದ ಕೇಟಿ ಬ್ರಿಯಾನ್ನಾ ಮತ್ತು ಜಪಾನ್‌ನ ಆಯಾಕಾ ಕುಮಾರಾ ಅವರ ಪಾಲಾಯಿತು.

ಅರ್ಹತಾ ಸುತ್ತಿನಲ್ಲಿಅಂತಿಮ್ 11-0ಯಿಂದ ಜರ್ಮನಿಯ ಆ್ಯಂಡ್ರಿಚ್ ಅಮೊರಿ ಒಲಿವಿಯಾ ಎದುರು ಗೆದ್ದಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಆಯಾಕ ಅವರನ್ನು ಮಣಿಸಿದ್ದರು.

ಬಳಿಕ ಸೆಮಿಫೈನಲ್‌ನಲ್ಲಿ ಉಕ್ರೇನ್‌ನ ನತಾಲಿಯಾ ವಿರುದ್ಧ 11–2ರಿಂದ ಗೆದ್ದು ಚಿನ್ನದ ಪದಕದ ಸುತ್ತಿಗೆ ತಲುಪಿದ್ದರು.

17 ವರ್ಷದ ಅಂತಿಮ್‌ ಹರಿಯಾಣದ ಹಿಸಾರ್ ಜಿಲ್ಲೆಯವರು.

ಸೋನಂ, ಪ್ರಿಯಾಂಕಾಗೆ ಬೆಳ್ಳಿ: ಭಾರತದಸೋನಂ 62 ಕೆ.ಜಿ. ವಿಭಾಗದಲ್ಲಿ ಮತ್ತು 65 ಕೆ.ಜಿ. ವಿಭಾಗದಲ್ಲಿ ಪ್ರಿಯಾಂಕಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಹಾಗೆಯೇ 57 ಕೆ.ಜಿ. ವಿಭಾಗದಲ್ಲಿ ಸಿಟೊ ಮತ್ತು 72 ಕೆ.ಜಿ ವಿಭಾಗದಲ್ಲಿ ರಿತಿಕಾ ಕಂಚಿನ ಪದಕ ಜಯಿಸಿದರು. 50 ಕೆಜಿ ವಿಭಾಗದಲ್ಲಿ ಪ್ರಿಯಾಂಶಿ ರಾಜಾವತ್ ಕೂಡ ಕಂಚು ಗೆದ್ದುಕೊಂಡರು. ರಿಪೇಜ್‌ ಸುತ್ತುಗಳಲ್ಲಿ ಅವರು ಗೆಲುವುಸಾಧಿಸಿದರು.

ಭಾರತಕ್ಕೆ ಎರಡನೇ ಸ್ಥಾನ: ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಏಳು ಪದಕಗಳನ್ನು ಜಯಿಸಿದ ಭಾರತ, ತಂಡ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿತು. ಜಪಾನ್ ತಂಡ ಮೊದಲ ಅಗ್ರಸ್ಥಾನ ತನ್ನದಾಗಿಸಿಕೊಂಡರೆ,ಮೂರನೇ ಸ್ಥಾನವು ಅಮೆರಿಕದ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT