400 ಮೀ ಫ್ರೀಸ್ಟೈಲ್ ಈಜು: ಟಿಟ್ಮಸ್ ವಿಶ್ವದಾಖಲೆ

ಅಡಿಲೇಡ್: ಆಸ್ಟ್ರೇಲಿಯಾದ ಎರಿಯರ್ನ್ ಟಿಟ್ಮಸ್ ಮಹಿಳೆಯರ 400 ಮೀಟರ್ಸ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು.
ಭಾನುವಾರ ನಡೆದ ಆಸ್ಟ್ರೇಲಿಯನ್ ಚಾಂಪಿಯನ್‌ಷಿಪ್‌ನಲ್ಲಿ ಟಿಟ್ಮಸ್ 3 ನಿಮಿಷ, 56.40 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ಅಮೆರಿಕದ ಕೇಟಿ ಲೆಡಕಿ ಅವರ ದಾಖಲೆಯನ್ನು ಹಿಂದಿಕ್ಕಿದರು.
21 ವರ್ಷದ ಟಿಟ್ಮಸ್ ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಲೆಡಕಿ ನಿರ್ಮಿಸಿದ್ದ ದಾಖಲೆ (3ನಿ,56.46ಸೆ) ದಾಖಲೆಯನ್ನು ಟಿಟ್ಮಸ್ ಇಲ್ಲಿ ಮೀರಿ ನಿಂತರು.
‘ಕಳೆದ ಆರು ತಿಂಗಳುಗಳಲ್ಲಿ ಈಜುವುದನ್ನು ಮನಪೂರ್ವಕವಾಗಿ ಆನಂದಿಸಿದ್ದೇನೆ. ಯಾವುದೇ ಒತ್ತಡಗಳಲ್ಲಿದಂತೆ ಅಭ್ಯಾಸ ಮಾಡುತ್ತಿರುವುದು ಯಶಸ್ಸು ಗಳಿಸಲು ದಾರಿಯಾಗಿದೆ’ ಎಂದು ಟಿಟ್ಮಸ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.