ಬುಧವಾರ, ಸೆಪ್ಟೆಂಬರ್ 29, 2021
20 °C

Tokyo Olympics | ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡವು, ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದೆ.

ಸೀ ಫಾರೆಸ್ಟ್ ವಾಟರ್‌ವೇನಲ್ಲಿ ನೀರಿಗಿಳಿದಿದ್ದ ಭಾರತ ಜೋಡಿಯು 6 ನಿಮಿಷ 51.33 ಸೆಕೆಂಡುಗಳಲ್ಲಿ ಗುರಿ ತಲುಪಿತು.

ಇದನ್ನೂ ಓದಿ: 

ಈ ಮೂಲಕ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆದರು.

 

 

 

ಈ ವಿಭಾಗದಲ್ಲಿ ಪೊಲೆಂಡ್‌ನ ಜೆರ್ಜಿ ಕೊವಾಸ್ಕಿ ಹಾಗೂ ಆರ್ಟೂರ್ ಮಿಕೊಲಾಜೆಸ್ಕಿ (6 ನಿ. 43.44 ಸೆ.) ಅಗ್ರಸ್ಥಾನ ಪಡೆದರೆ ಸ್ಪೇನ್‌ನ ಕ್ಯಾಟನೊ ಹೊರ್ಟಾ ಪಾಂಬೊ ಮತ್ತು ಮ್ಯಾನೆಲ್ ಬಾಲಸ್ಟೆಗುಯಿ (6 ನಿ. 45.71 ಸೆ.) ಎರಡನೇ ಸ್ಥಾನ ಗಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು