ಸೋಮವಾರ, ಅಕ್ಟೋಬರ್ 26, 2020
23 °C
ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಟೂರ್ನಿ

ಜಂಟಿ ಅಗ್ರಸ್ಥಾನದಲ್ಲಿ ಭಾರತ ಮಹಿಳಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಮಹಿಳಾ ತಂಡ ಏಷ್ಯನ್‌ ನೇಷನ್ಸ್ ಕಪ್‌ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ಅಂತ್ಯಕ್ಕೆ ಫಿಲಿಪ್ಪೀನ್ಸ್ ಹಾಗೂ ಇರಾನ್‌ನೊಂದಿಗೆ ಜಂಟಿ ಅಗ್ರಸ್ಥಾನ ಅಲಂಕರಿಸಿದೆ.

ಮೂರು ಸುತ್ತಿನ ಬಳಿಕ ಎಂಟನೇ ಸ್ಥಾನದಲ್ಲಿದ್ದ ಅಗ್ರ ಶ್ರೇಯಾಂಕದ ಭಾರತದ ಆಟಗಾರ್ತಿಯರು, ಬಳಿಕ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡರು. ನಾಲ್ಕನೇ ಸುತ್ತಿನಲ್ಲಿ 3.5–0.5ರಿಂದ ಮ್ಯಾನ್ಮಾರ್‌ ವಿರುದ್ಧ, ಐದನೇ ಸುತ್ತಿನಲ್ಲಿ ಸಿಂಗಪುರ ಎದುರು 4–0ದಿಂದ ಹಾಗೂ ಆರನೇ ಸುತ್ತಿನಲ್ಲಿ ಇಂಡೊನೇಷ್ಯಾ ತಂಡವನ್ನು 3–1ರಿಂದ ಭಾರತದ ಆಟಗಾರ್ತಿಯರು ಮಣಿಸಿದರು.

ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಹಾಗೂ ಅಂತರರಾಷ್ಟ್ರೀಯ ಮಾಸ್ಟರ್‌ ಪದ್ಮಿಣಿ ರೌತ್‌ ತಾವಾಡಿದ ಮೂರೂ ಪಂದ್ಯಗಳಲ್ಲಿ ಜಯದ ನಗೆ ಬೀರಿದರು. ಚೆನ್ನೈನ ವೈಶಾಲಿ ಅವರು ಐರಿನ್‌ ಕರೀಷ್ಮಾ ಸುಖಂದರ್‌ (ಇಂಡೊನೇಷ್ಯಾ), ಕಿಯಾನ್ಯುನ್‌ ಗಾಂಗ್‌ (ಸಿಂಗಪುರ) ಹಾಗೂ ಮ್ಯಾನ್ಮಾರ್‌ನ ಸು ವಿನ್‌ ಅವರನ್ನು ಪರಾಭವಗೊಳಿಸಿದರು.

ಪದ್ಮಿಣಿ ಅವರು ಮ್ಯಾನ್ಮಾರ್‌ನ ಸೋ ಓಮರ್‌, ಸಿಂಗಪುರದ ಯಾಂಗ್‌ ಹೆಜೆಲ್‌ ಲೀ ಹಾಗೂ ಇಂಡೊನೇಷ್ಯಾದ ಚೆಲ್ಸಿ ಮೋನಿಕಾ ಇಗ್ನೇಷಿಯಸ್‌ ಸಿಹಿಟೆ ಅವರನ್ನು ಮಣಿಸಿದರು.

ಭಾರತದ ಬಳಿ ಸದ್ಯ 10 ಪಾಯಿಂಟ್‌ಗಳಿವೆ. ಫಿಲಿಪ್ಪೀನ್ಸ್ ಹಾಗೂ ಇರಾನ್‌ ತಂಡಗಳೂ ಇಷ್ಟೇ ಪಾಯಿಂಟ್ಸ್ ಕಲೆಹಾಕಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.