ಶನಿವಾರ, ಏಪ್ರಿಲ್ 4, 2020
19 °C

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ದಹಿಯಾಗೆ ಚಿನ್ನ, ಬಜರಂಗ್‌ಗೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ರವಿ ದಹಿಯಾ ಅವರು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ ನಲ್ಲಿ ಶನಿವಾರ 57 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದರು. ಬಜರಂಗ್‌ ಪೂನಿಯಾ 65 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡರು.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟ ದಲ್ಲಿ, ದಹಿಯಾ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10–0 ಅಂತರದಿಂದ ತಜಿಕಿಸ್ತಾನದ ಹಿಕ್ಮತ್‌ಉಲ್ಲೊ ವೊಹಿಡೊವ್‌ ಅವರನ್ನು ಸೋಲಿಸಿದರು.

ಬಜರಂಗ್‌ ಪೂನಿಯಾ ಫೈನಲ್‌ನಲ್ಲಿ 2–10 ಅಂತರದಿಂದ ಜಪಾನ್‌ನ ಟಕುಟೊ ಒಟೊಗುರೊ ಅವರಿಗೆ ಮಣಿದರು.

ಸತ್ಯವ್ರತ ಕಡಿಯಾನ್, ಗೌರವ್‌ ಬಲಿಯಾನ್‌ ಕೂಡ ಬೆಳ್ಳಿ ಗೆದ್ದರು. 97 ಕೆ.ಜಿ ವಿಭಾಗದಲ್ಲಿ ಸತ್ಯವ್ರತ ಕಡಿಯಾನ್‌ ಫೈನಲ್‌ನಲ್ಲಿ ಮೊಜ್ತಾಬ ಮೊಹಮ್ಮದ್‌ಶಫಿ ಗೊಲಿಜ್‌ ಅವರಿಗೆ ಸೋತರು. 79 ಕೆ.ಜಿ.ವಿಭಾಗದ ಫೈನಲ್‌ನಲ್ಲಿ ಗೌರವ್‌ 5–7 ರಿಂದ ಕಿರ್ಗಿಸ್ತಾನದ ಅರ್ಸಲಾನ್‌ ಬುಡಜಪೋವ್‌ ಎದುರು ಸೋಲನುಭವಿಸಬೇಕಾಯಿತು.

79 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಗೌರವ್‌ ಬಲಿಯಾನ್‌ ಅವರು ಜಪಾನ್‌ನ ಒಕುಯ್‌ ಶಿಂಕಿಚಿ ಎದುರು 6–5ರಿಂದ ಗೆದ್ದರೆ, ಹಾಗೂ 97 ಕೆಜಿ ವಿಭಾಗದಲ್ಲಿ ಸತ್ಯವ್ರತ್‌ ಕಡಿಯಾನ್‌, ತಜಿಕಿಸ್ತಾನದ ಇಸ್ಕಂದರಿ ರುಸ್ತಮ್‌ ಅವರನ್ನು ಮಣಿಸಿ ಫೈನಲ್‌ಗೆ ಕಾಲಿಟ್ಟಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು