ಬೆಂಗಳೂರು: ನೈರೋಬಿಯಲ್ಲಿ ಈಚೆಗೆ ನಡೆದ ವಿಶ್ವ ಯೂತ್ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬೆಂಗಳೂರಿನ ಪ್ರಿಯಾ ಮೋಹನ್ ತಮ್ಮ ಯಶಸ್ಸಿನ ಹಿಂದಿನ ಗುಟ್ಟು ಬಿಚ್ಚಿಟ್ಟದ್ದಾರೆ.

ಅವರು ಕಳೆದ 11 ತಿಂಗಳುಗಳಿಂದ ಸಕ್ಕರೆ ಇಲ್ಲದ ಕೋಲ್ಡ್ ಕಾಫಿ ಮತ್ತು ಚೀಸ್ ಲೇಪಿಸದ ಸ್ಯಾಂಡ್‌ವಿಚ್‌ಗಳನ್ನು ತಿನ್ನುತ್ತಿದ್ದರು. ಇದೀಗ ಕೂಟವನ್ನು ಮುಗಿಸಿ ಬೆಂಗಳೂರಿಗೆ ಮರಳಿದ ನಂತರ ಮತ್ತೆ ಸಕ್ಕರೆಯುಕ್ತ ಕಾಫಿ ಮತ್ತು ಸ್ಯಾಂಡ್‌ವಿಚ್ ಸೇವಿಸಿ ಖುಷಿಪಟ್ಟಿದ್ದಾರೆ.

ನೈರೋಬಿಯಲ್ಲಿ ನಡೆದಿದ್ದ 4X400 ಮೀ ಮಿಶ್ರ ರಿಲೆಯಲ್ಲಿ ಪ್ರಿಯಾ ಅವರಿದ್ದ ತಂಡವು ಕಂಚಿನ ಪದಕ ಗೆದ್ದಿತ್ತು. ಕೋಚ್ ಅರ್ಜುನ್ ಅಜಯ್ ಅವರ ಮಾರ್ಗದರ್ಶನದಲ್ಲಿ ಪ್ರಿಯಾ ಈ ಸಾಧನೆ ಮಾಡಿದ್ದಾರೆ. ‘ನೈರೋಬಿಯು ಎತ್ತರದ ಪ್ರದೇಶದಲ್ಲಿದೆ. ಆ ವಾತಾವರಣಕ್ಕೆ ಹೊಂದಿ ಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಅದಕ್ಕಾಗಿ ಉದಕಮಂಡಲದಲ್ಲಿ 35 ದಿನಗಳವರೆಗೆ ಅಭ್ಯಾಸ ಮಾಡಿದ್ದೆ. ಉದಕಮಂಡಲವು ಸಮುದ್ರಮಟ್ಟಕ್ಕಿಂತ ಸುಮಾರು 2240 ಮೀ. ಎತ್ತರದಲ್ಲಿದೆ’ ಎಂದು ಪ್ರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.