ಫೈನಲ್‌ಗೆ ಪರುಪಳ್ಳಿ ಕಶ್ಯಪ್ ಲಗ್ಗೆ

ಕ್ಯಾಲ್ಗರಿ, ಕೆನಡಾ: ಮತ್ತೊಂದು ಮಿಂಚಿನ ಪ್ರದರ್ಶನ ತೋರಿದ ಭಾರತದ ಪರುಪಳ್ಳಿ ಕಶ್ಯಪ್ ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶನಿವಾರ ಫೈನಲ್‌ಗೆ ಲಗ್ಗೆಯಿಟ್ಟರು.
ಸೆಮಿಫೈನಲ್ ಪಂದ್ಯದಲ್ಲಿ ಅವರು ನಾಲ್ಕನೇ ಶ್ರೇಯಾಂಕದ ಚೀನಾ ತೈಪೇಯ ಆಟಗಾರ ವಾಂಗ್ ಜು ವೇಯ್ ಅವರನ್ನು ಮಣಿಸಿದರು.
ನಾಲ್ಕು ತಾಸು 10 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಕಶ್ಯಪ್, ಆರಂಭದ ಗೇಮ್‌ನ ಹಿನ್ನಡೆಯನ್ನು ಮೀರಿದರು.
14–21, 21–17, 21–18ರಿಂದ ಜಯದ ನಗೆ ಬೀರಿದರು. ಈ ಗೆಲುವಿನೊಂದಿಗೆ ಕಶ್ಯಪ್ ಅವರು ವಾಂಗ್ ವಿರುದ್ಧ ಹೆಡ್–ಟು–ಹೆಡ್ ದಾಖಲೆಯನ್ನು 3–0ಗೆ ಹೆಚ್ಚಿಸಿಕೊಂಡಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ನಡೆದ ಇಂಡಿಯಾ ಓಪನ್ ಟೂರ್ನಿಯಲ್ಲಿ ವಿಶ್ವದ 30ನೇ ಕ್ರಮಾಂಕದ ಆಟಗಾರ ವಾಂಗ್ ಅವರನ್ನು ಕಶ್ಯಪ್ ಸೋಲಿಸಿದ್ದರು.
ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಶ್ರೇಯಾಂಕರಹಿತ ಆಟಗಾರ ಚೀನಾದ ಲಿ ಷಿ ಫೆಂಗ್ ಅವರನ್ನು ಕಶ್ಯಪ್ ಎದುರಿಸುವರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಫೆಂಗ್ ಅವರು ಜಪಾನ್ ಆಟಗಾರ ಕೊಕಿ ವಾಟನಬೆ ವಿರುದ್ಧ 20–22, 21–10, 21–11ರಿಂದ ಜಯದ ಮಾಲೆ ಧರಿಸಿದರು.
ಕಳೆದ ವರ್ಷ ಆಸ್ಟ್ರಿಯನ್ ಅಂತರರಾಷ್ಟ್ರೀಯ ಚಾಲೆಂಜರ್ ಟೂರ್ನಿಯಲ್ಲಿ ಕಶ್ಯಪ್ ಸೆಮಿಫೈನಲ್ ತಲುಪಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.