ಮಂಗಳವಾರ, ಜೂನ್ 2, 2020
27 °C

ಬಾರ್ಸಿಲೋನಾ ಬ್ಯಾಡ್ಮಿಂಟನ್ ಟೂರ್ನಿ: ಸೈನಾ ಜಯಭೇರಿ, ಪ್ರಣಯ್‌ಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಬಾರ್ಸಿಲೋನಾ: ಎದುರಾಳಿಯನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಬಾರ್ಸಿಲೋನಾ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಅವರು ಜರ್ಮನಿಯ ಯುವೋನಿ ಲೀ ಎದುರು 21–16, 21–14ರಲ್ಲಿ ಜಯ ಗಳಿಸಿದರು. ಪಂದ್ಯ ಕೇವಲ 35 ನಿಮಿಷಗಳಲ್ಲಿ ಮುಕ್ತಾಯಗೊಂಡಿತು.

ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಭಾರತದ ಪ್ರಣವ್ ಜೆರಿ ಚೋಪ್ರ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಡೆನ್ಮಾರ್ಕ್‌ನ ಮಥಿಯಾಸ್ ಕ್ರಿಸ್ಟಿಯನ್‌ಸೆನ್ ಹಾಗೂ ಅಲೆಕ್ಸಾಂಡರ್ ಬೋಜೆ ಅವರನ್ನು 10–21, 21–16, 21–17ರಲ್ಲಿ ಮಣಿಸಿತು.

ಡ್ಯಾರೆನ್ ಲ್ಯೂಗೆ ಮಣಿದ ಪ್ರಣಯ್‌: ಭಾರತದ ಎಚ್‌.ಎಸ್‌.ಪ್ರಣಯ್ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಮಲೇಷ್ಯಾದ ಡ್ಯಾರೆನ್ ಲ್ಯೂ ಎದುರು 18–21, 15–21ರಲ್ಲಿ ಸೋತು ಹೊರಬಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು