ಬೆಂಗಳೂರು: ಅಮೋಘ ಆಟವಾಡಿದ ಬೆಂಗಳೂರು ಸೌತ್ ತಂಡ, ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ ಐಎನ್‌ಬಿಎಲ್ 3x3 ಬ್ಯಾಸ್ಕೆಟ್‌ಬಾಲ್ ಲೀಗ್‌ನ 18 ವರ್ಷದೊಳಗಿನ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ 16ರ ಘಟ್ಟದ ಹಣಾಹಣಿಯಲ್ಲಿ ಗುವಾಹಟಿ ತಂಡವನ್ನು ಬೆಂಗಳೂರು 17–9ರಲ್ಲಿ ಮಣಿಸಿತು. ಭಾನುವಾರ ನಡೆಯಲಿರುವ 8ರ ಘಟ್ಟದ ಪಂದ್ಯದಲ್ಲಿ ಬೆಂಗಳೂರು, ಇಂದೋರ್ ವಿರುದ್ಧ ಸೆಣಸಲಿದೆ. ಚೆನ್ನೈ ಸೆಂಟ್ರಲ್ ತಂಡವನ್ನು ಇಂದೋರ್ 21–15ರಲ್ಲಿ ಸೋಲಿಸಿತು.

ಡೆಲ್ಲಿಯನ್ನು ಲುಧಿಯಾನ 14–7ರಲ್ಲಿ, ಮುಂಬೈಯನ್ನು ಲಖನೌ 10–8ರಲ್ಲಿ, ಕೊಚ್ಚಿಯನ್ನು ಚೆನ್ನೈ 22–21ರಲ್ಲಿ ಸೋಲಿಸಿತು. ಹೈದರಾಬಾದ್ ವಿರುದ್ಧ ಚಂಢೀಗಡ 16–6ರಲ್ಲಿ, ಕೋಲ್ಕತ್ತ ವಿರುದ್ಧ ಭಿಲಾಯ್ 18–6ರಲ್ಲಿ, ಬೆಂಗಳೂರು ಈಸ್ಟ್ ವಿರುದ್ಧ ಜೈಪುರ 13–11ರಲ್ಲಿ, ಜೈಪುರ ವಿರುದ್ಧ ಭಾವನಗರ 18–17ರಲ್ಲಿ ಜಯ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.