ಇಂಗ್ಲೆಂಡ್‌ ಮೇಲೆ ಆಸ್ಟ್ರೇಲಿಯಾ ಗೋಲು ಮಳೆ

7
ಟಾಮ್ ಕ್ರೇಗ್‌ ಹ್ಯಾಟ್ರಿಕ್‌; ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದ ಜೆರೆಮಿ ಹೇವಾರ್ಡ್‌

ಇಂಗ್ಲೆಂಡ್‌ ಮೇಲೆ ಆಸ್ಟ್ರೇಲಿಯಾ ಗೋಲು ಮಳೆ

Published:
Updated:
Deccan Herald

ಭುವನೇಶ್ವರ: ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಕೈಗೂಡದೆ ಶನಿವಾರ ನಿರಾಸೆಗೆ ಒಳಗಾಗಿದ್ದ ಆಸ್ಟ್ರೇಲಿಯಾ ವಿಶ್ವಕಪ್ ಹಾಕಿ ಟೂರ್ನಿಯ ಕಂಚಿನ ಪದಕದ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ 8–1ರಿಂದ ಗೆದ್ದಿತು.

ನೆದರ್ಲೆಂಡ್ಸ್ ಎದುರು ಶನಿವಾರ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತಿತ್ತು. ನಿಗದಿತ ಅವಧಿಯಲ್ಲಿ ಸಮಬಲ ಆಗಿದ್ದರಿಂದ ಶೂಟ್ ಆಫ್‌, ಆ ನಂತರ ಸಡನ್‌ ಡೆತ್‌ ಮೂಲಕ ಫಲಿತಾಂಶ ನಿರ್ಣಯಿಸಲಾಯಿತು.

ಭಾನುವಾರದ ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾ ಆಸ್ಟ್ರೇಲಿಯಾ ಎಂಟನೇ ನಿಮಿಷದಲ್ಲಿ ಬ್ಲೇಕ್ ಗೋವರ್ಸ್ ಗಳಿಸಿದ ಗೋಲಿನ ಮೂಲಕ ಖಾತೆ ತೆರೆಯಿತು. ನಂತರ ನಿರಂತರವಾಗಿ ಎದುರಾಳಿಗಳನ್ನು ಕಾಡಿತು. ಟಾಮ್‌ ಕ್ರೇಗ್‌ (9, 19, 34ನೇ ನಿಮಿಷ) ಹ್ಯಾಟ್ರಿಕ್ ಸಾಧನೆ ಮಾಡಿದರೆ ಜೆರೆಮಿ ಹೇವಾರ್ಡ್‌ (57, 60ನೇ ನಿ) ಕೊನೆಯ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಜಯದ ಅಂತರವನ್ನು ಹೆಚ್ಚಿಸಿದರು.

ಟ್ರೆಂಟ್‌ ಮಿಟನ್‌ (32ನೇ ನಿ) ಹಾಗೂ ಟಿಮ್ ಬ್ರಾಂಡ್‌ (34) ಒಂದೊಂದು ಗೋಲುಗಳ ಕಾಣಿಕೆ ನೀಡಿದರು. ನ್ಯಾರಿ ಮಿಡಲ್‌ಟನ್‌ (45ನೇ ನಿ) ಇಂಗ್ಲೆಂಡ್ ಪರ ಏಕೈಕ ಗೋಲು ಗಳಿಸಿದರು. ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಕೈಚೆಲ್ಲಿದ ಇಂಗ್ಲೆಂಡ್ ನಿರಾಸೆಗೆ ಒಳಗಾಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !