ಶನಿವಾರ, ಜನವರಿ 18, 2020
26 °C

ಚೆಸ್‌: ಡ್ರಾ ಪಂದ್ಯದಲ್ಲಿ ಆನಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಿಜ್ಕ್‌ ಆನ್‌ ಜೀ, ನೆದರ್ಲೆಂಡ್ಸ್‌ : ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಭಾನುವಾರ ನಡೆದ ಹಣಾಹಣಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರು ರಷ್ಯಾದ ಗ್ರ್ಯಾಂಡ್‌ ಮಾಸ್ಟರ್‌ ವ್ಲಾದಿಸ್ಲಾವ್‌ ಅರ್ಟೆಮೀವ್‌ ಎದುರು ಪಾಯಿಂಟ್‌ ಹಂಚಿಕೊಂಡರು.

ಇನ್ನೊಂದು ಪಂದ್ಯದಲ್ಲಿ ನಾರ್ವೆಯ ಆಟಗಾರ, ಹಾಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ನೆದರ್ಲೆಂಡ್ಸ್‌ನ ಅನಿಶ್‌ ಗಿರಿ ಎದುರು ಡ್ರಾ ಸಾಧಿಸಿದರು.

ನೆದರ್ಲೆಂಡ್ಸ್‌ನ ಜೋರ್ಡನ್‌ ವಾನ್‌ ಫೋರೀಸ್ಟ್‌ ಅವರು ಚೀನಾದ ಯು ಯಾಂಗ್ಯಿ ವಿರುದ್ಧ ಗೆದ್ದು ಪೂರ್ಣ ಪಾಯಿಂಟ್‌ ಕಲೆಹಾಕಿದರು.

ಫಿರೋಜ್‌ ಅಲಿರೆಜಾ ಅವರು ವ್ಲಾದಿಸ್ಲಾವ್‌ ಕೊವಾಲೆವ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಜೆಫ್ರಿ ಕ್ಸಿಯಾಂಗ್‌, ಡೇನಿಯಲ್‌ ಡುಬೊವ್‌ ಎದುರೂ; ಫಾಬಿಯಾನೊ ಕರುವಾನ, ವೆಸ್ಲಿ ಸೊ ಮೇಲೂ; ನಿಕಿತ್‌ ವಿಟಿಯುಗೊವ್‌, ಜಾನ್‌ ಕ್ರಿಜಿಟೊಫ್‌ ಡೂಡಾ ವಿರುದ್ಧವೂ ಡ್ರಾ ಮಾಡಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು