ಮಂಗಳವಾರ, ಜುಲೈ 27, 2021
20 °C

ಚೆಸ್‌: ಹರಿಕೃಷ್ಣಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ (ಪಿಟಿಐ): ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಶಾರ್ಜಾ ಆನ್‌ಲೈನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನ ಪೈಪೋಟಿಯಲ್ಲಿ ಹರಿಕೃಷ್ಣ ಅವರು ಪೋಲೆಂಡ್‌ನ ಗ್ರ್ಯಾಂಡ್‌ ಮಾಸ್ಟರ್‌ ರಾಡೊಸ್ಲಾವ್‌ ವೊಜ್ತಾಸ್‌ಜೆಕ್‌ ವಿರುದ್ಧ ಪರಾಭವಗೊಂಡರು. ಭಾರತದ ಆಟಗಾರ, ಹತ್ತು ಸುತ್ತುಗಳಿಂದ ಒಟ್ಟು 6.5 ಪಾಯಿಂಟ್ಸ್‌ ಕಲೆಹಾಕಿದರು.

ಅಜರ್‌ಬೈಜಾನ್‌ನ ಆಟಗಾರ ಶಖ್ರಿಯಾರ್‌ ಮಮೆಡ್ಯರೊವ್‌ ಅವರು ಚಾಂಪಿಯನ್‌ ಆದರು. ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಶಖ್ರಿಯಾರ್‌ ಒಟ್ಟು 7.5 ಪಾಯಿಂಟ್ಸ್‌ ಸಂಗ್ರಹಿಸಿದರು.

ಶಖ್ರಿಯಾರ್‌ ಅವರು ₹ 2.27 ಲಕ್ಷ ಬಹುಮಾನ ಜೇಬಿಗಿಳಿಸಿದರೆ, ಹರಿಕೃಷ್ಣ ಅವರು ₹1.70 ಲಕ್ಷ ಪಡೆದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು