ಗುರುವಾರ , ಏಪ್ರಿಲ್ 9, 2020
19 °C

ಕೊರೊನಾ ಸೋಂಕು: ಫುಟ್‌ಬಾಲ್ ಕೋಚ್‌ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಮ್ಯಾಡ್ರಿಡ್‌: ಕೊರೊನಾ ಸೋಂಕು ಲಕ್ಷಣಗಳನ್ನು ಹೊಂದಿದ್ದ ಸ್ಪೇನ್‌ ದೇಶದ ಕ್ಲಬ್‌ ಫುಟ್‌ಬಾಲ್‌ ತಂಡದ ಕೋಚ್‌ ಒಬ್ಬರು  ಮೃತಪಟ್ಟಿ ದ್ದಾರೆ. ಅಟ್ಲೆಟಿಕೊ ಪೊರ್ಟಡಾ ಅಟ್ಲಾ ತಂಡಕ್ಕೆ ತರಬೇತಿದಾರರಾಗಿದ್ದ ಫ್ರಾನ್ಸಿಸ್ಕೊ ಗಾರ್ಸಿಯಾ (21) ಮೃತಪಟ್ಟವರು.

ಸೋಂಕಿನ ತೀವ್ರ ಲಕ್ಷಣಗಳು ಕಂಡುಬಂದ ಮಲಗಾ ವಲಯದ ಗಾರ್ಸಿಯಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರು ಲ್ಯೂಕೆಮಿಯಾದಿಂದ ಬಳಲುತ್ತಿದ್ದದ್ದೂ ಕಂಡುಬಂದಿದೆ.

ಲ್ಯೂಕೆಮಿಯಾ ಇಲದಿದ್ದರೆ  ಗಾರ್ಸಿಯಾ ಅವರು ಬದುಕುಳಿಯುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು