ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿ | ಚಾಂಪಿಯನ್‌ಷಿಪ್‌ಗಳನ್ನು ಮುಂದೂಡಿದ ಹಾಕಿ ಇಂಡಿಯಾ

Last Updated 16 ಮಾರ್ಚ್ 2020, 15:01 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್‌ 10ರಿಂದ ನಿಗದಿಯಾಗಿದ್ದ ಎಲ್ಲರಾಷ್ಟ್ರೀಯ ಜೂನಿಯರ್‌ ಹಾಗೂ ಸಬ್‌ಜೂನಿಯರ್‌ ಚಾಂಪಿಯನ್‌ಷಿಪ್‌ಗಳನ್ನು ಹಾಕಿ ಇಂಡಿಯಾ ಮುಂದೂಡಿದೆ. ಕೊರೊನಾ ಸೋಂಕು ಭೀತಿಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪರಿಸ್ಥಿತಿಗೆ ಸುಧಾರಿಸಿದರೆ ಮುಂದಿನ ತಿಂಗಳ ಅಂತ್ಯದಲ್ಲಿ ಈ ಟೂರ್ನಿಗಳನ್ನು ಆಯೋಜಿಸುವ ವಿಶ್ವಾಸ ಹೊಂದಿದೆ.

ಕೊರೊನಾ ವೈರಸ್‌ನಿಂದಾಗಿ ದೇಶದಲ್ಲಿ ಈಗಾಗಲೇಇಬ್ಬರು ಸಾವಿಗೀಡಾಗಿದ್ದಾರೆ‌. 110ಕ್ಕೂ ಹೆಚ್ಚು ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ.

‌‘ಆಟಗಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಚಾಂಪಿಯನ್‌ಷಿಪ್‌ ನಡೆಯುವ ಪರಿಷ್ಕೃತ ದಿನಾಂಕಗಳನ್ನೂ ಪ್ರಕಟಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಸನ್ನಿವೇಶ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹ್ಮದ್ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಪ್ರಪಂಚದಾದ್ಯಂತ ಸುಮಾರು 1,20,000 ಸಾವಿರ ಜನರಿಗೆ ಸೋಂಕು ಇರುವುದು ದೃಢವಾಗಿದ್ದು, ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಕೋವಿಡ್‌–19ಗೆದೇಶದಲ್ಲಿಯೂ ಇಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ಹಾಕಿ ಇಂಡಿಯಾ ಟೂರ್ನಿಗಳ ಪಟ್ಟಿ


ಟೂರ್ನಿ
ಸ್ಥಳ ನಿಗದಿಯಾಗಿದ್ದ ದಿನ ಮುಂದೂಡಿದ ದಿನ
ಜೂನಿಯರ್‌ ಮಹಿಳಾ(ಬಿ ಡಿವಿಷನ್‌) ರಾಂಚಿ ಏಪ್ರಿಲ್‌ 10–20 ಏಪ್ರಿಲ್‌ 29–ಮೇ 9
ಜೂನಿಯರ್‌ ಪುರುಷ(ಬಿ ಡಿವಿಷನ್‌)

ಚೆನ್ನೈ

ಏಪ್ರಿಲ್‌ 15–26

ಮೇ14–21

ಸಬ್‌ ಜೂನಿಯರ್‌ ಮಹಿಳಾ(ಬಿ ಡಿವಿಷನ್‌) ಹಿಸ್ಸಾರ್‌ ಏಪ್ರಿಲ್‌ 13–24

ಮೇ 3–14

ಜೂನಿಯರ್‌ ಪುರುಷ(ಎ ಡಿವಿಷನ್‌) ಚೆನ್ನೈ ಏಪ್ರಿಲ್‌ 10–17

ಮೇ19–30

ಜೂನಿಯರ್‌ ಮಹಿಳಾ(ಎ ಡಿವಿಷನ್‌) ರಾಂಚಿ ಏಪ್ರಿಲ್‌ 18–28

ಮೇ 7–17

ಸಬ್‌ಜೂನಿಯರ್‌ ಮಹಿಳಾ(ಎ ಡಿವಿಷನ್‌) ಹಿಸ್ಸಾರ್‌ ಏಪ್ರಿಲ್‌ 22–ಮೇ 3 ಮೇ 12–23
ಸಬ್‌ಜೂನಿಯರ್‌ ಪುರುಷ(ಬಿ ಡಿವಿಷನ್‌) ಇಂಫಾಲ್‌ ಏಪ್ರಿಲ್‌ 26–ಮೇ 3 ಮೇ 28–ಜೂನ್‌ 4
ಸಬ್‌ಜೂನಿಯರ್‌ ಪುರುಷ(ಎ ಡಿವಿಷನ್‌) ಇಂಫಾಲ್‌ ಮೇ 7–17 ಜೂನ್‌ 3–13

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT