ವಾಯು ಮಾಲಿನ್ಯಕ್ಕೆ ಬೆದರಿದ ಮಹಿಳಾ ಬಾಕ್ಸರ್‌ಗಳು

7

ವಾಯು ಮಾಲಿನ್ಯಕ್ಕೆ ಬೆದರಿದ ಮಹಿಳಾ ಬಾಕ್ಸರ್‌ಗಳು

Published:
Updated:
Deccan Herald

ನವದೆಹಲಿ: ಎಐಬಿಎ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಬಂದಿರುವ ಮಹಿಳಾ ಬಾಕ್ಸರ್‌ಗಳು ಭಾನುವಾರ ಇಲ್ಲಿನ ವಾಯುಮಾಲಿನ್ಯಕ್ಕೆ ಬೆದರಿ ಕಂಗೆಟ್ಟರು. ಯುರೋಪ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಜೀಜ್‌ ನಿಮಾನಿ ಒಳಗೊಂಡಂತೆ ಅನೇಕರು ಮಾಲಿನ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ಅನೇಕ ನಗರಗಳಿಗೆ ಭೇಟಿ ನೀಡಿದ್ದೇವೆ. ಇಲ್ಲಿ ಅನುಭವಿಸಿದಷ್ಟು ತೊಂದರೆ ಬೇರೆಲ್ಲೂ ಅನುಭವಿಸಿಲ್ಲ. ಉಸಿರಾಟಕ್ಕೆ ತೊಂದರೆಯಾಗುತ್ತಿದ್ದು ಇಲ್ಲಿ ಅಭ್ಯಾಸ ಮಾಡುವುದು ಕಷ್ಟ’ ಎಂದು ಬಲ್ಗೇರಿಯಾದ ಸ್ಟಾನಿಮಿರಾ ಪೆಟ್ರೋವ ದೂರಿದರು. 2014ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಪೆಟ್ರೋವ ಇಲ್ಲಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

‘ಭಾರತಕ್ಕೆ ಇದೇ ಮೊದಲ ಬಾರಿ ಬಂದಿದ್ದೇನೆ. ಇಲ್ಲಿನ ಜನರು ತುಂಬ ಒಳ್ಳೆಯವರು. ಆದರೆ ವಾಯುಮಾಲಿನ್ಯದಿಂದ ನಗರವನ್ನು ಕಾಪಾಡಲು ಏನಾದರೂ ಕ್ರಮ ಕೈಗೊಳ್ಳಬೇಕಾಗಿತ್ತು’ ಎಂದು ಅಜೀಜ್‌ ನಿಮಾನಿ ಹೇಳಿದರು.

ಪಂಜಾಬ್‌ ಮತ್ತು ಹರಿಯಾಣದಲ್ಲಿ ವಿವಿಧ ಬೆಳೆಗಳ ತ್ಯಾಜ್ಯವನ್ನು ಸುಡುವುದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ದೀಪಾವಳಿ ಸಂದರ್ಭದಲ್ಲಿ ವಿಪರೀತವಾಗಿ ಪಟಾಕಿಗಳನ್ನು ಸುಟ್ಟಿರುವುದರಿಂದ ವಾಯು ಗುಣಮಟ್ಟ ಇನ್ನಷ್ಟು ಹದಗೆಟ್ಟಿದೆ. ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಸಿಡಿಸಬಾರದು ಎಂದು ನ್ಯಾಯಾಲಯ ಇತ್ತೀಚೆಗೆ ಸೂಚಿಸಿತ್ತು. ಈ ಆದೇಶಕ್ಕೆ ಜನರು ಬೆಲೆ ನೀಡಲಿಲ್ಲ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !