ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹಾಕಿ: ಗೋವಿಂದರಾಜು ಮಿಂಚು

Last Updated 12 ನವೆಂಬರ್ 2022, 17:40 IST
ಅಕ್ಷರ ಗಾತ್ರ

ಬೆಂಗಳೂರು: ಗೋವಿಂದರಾಜು ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಸದರ್ನ್‌ ಅಲ್ಫಾ ಸ್ಪೋರ್ಟ್ಸ್ ಅಕಾಡೆಮಿ ತಂಡವು ಕರ್ನಾಟಕ ರಾಜ್ಯ ಸಿ ಡಿವಿಷನ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಜಯ ಗಳಿಸಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಸದರ್ನ್‌ ಅಲ್ಫಾ 5–2ರಿಂದ ಬಿಸಿವೈಎ ಬಿ ತಂಡವನ್ನು ಸೋಲಿಸಿತು. ಗೋವಿಂದರಾಜು 12, 26, 35ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ವಿಜೇತ ತಂಡಕ್ಕಾಗಿ ಸುರೇಶ್‌ (7, 46ನೇ ನಿ.) ಎರಡು ಗೋಲು ದಾಖಲಿಸಿದರು. ಬಿಸಿವೈಎ ಪರ ನಿರನ್ ಸುಬ್ಬಯ್ಯ (34ನೇ ನಿ.) ಮತ್ತು ಸಂತೋಷ್‌ ಕೆ. (44ನೇ ನಿ.) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಐಡಿಯಲ್ ಸ್ಪೋರ್ಟ್ಸ್ ಅಕಾಡೆಮಿ ‘ಬಿ’ ತಂಡವು 3–1ರಿಂದ ನವೀನ್ ಹಾಕಿ ಕ್ಲಬ್ ಬಿ ಎದುರು ಗೆದ್ದಿತು. ವಿಜೇತ ತಂಡದ ಪರ ಶಿವ ಸೂರ್ಯ (3ನೇ ನಿ.), ಬಾಲಾಜಿ (29ನೇ ನಿ.) ಮತ್ತು ಶಿವ ಶಂಕರನ್‌ (41ನೇ ನಿ.) ಗೋಲು ಹೊಡೆದರು. ನವೀನ್ ಕ್ಲಬ್‌ಗಾಗಿ ಸೂರಜ್‌ (46ನೇ ನಿ.) ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT