ಶನಿವಾರ, ಡಿಸೆಂಬರ್ 3, 2022
26 °C

ಬ್ಯಾಸ್ಕೆಟ್‌ಬಾಲ್‌: ಬೆಂಗಳೂರಿನಲ್ಲಿ ಏಷ್ಯಾಕಪ್ ಪ್ರೀಕ್ವಾಲಿಫೈಯರ್ಸ್ ಪಂದ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫಿಬಾ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಸಿ ಗುಂಪಿನ ಪ್ರೀಕ್ವಾಲಿಫೈಯರ್ಸ್ ಪಂದ್ಯಗಳಿಗೆ ಇಂದಿನಿಂದ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ನವೆಂಬರ್ 12ರವರೆಗೆ ನಡೆಯಲಿರುವ ಪಂದ್ಯಗಳಲ್ಲಿ ಗುವಾಮ್‌, ಹಾಂಗ್‌ಕಾಂಗ್ ಮತ್ತು ಸಿಂಗಪುರ ತಂಡಗಳು ಆಡಲಿವೆ. ಇಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಏಷ್ಯಾಕಪ್‌ ಕ್ವಾಲಿಫೈಯರ್ಸ್‌ಗೆ ಪ್ರವೇಶ ಪಡೆಯಲಿವೆ.

ಗುರುವಾರ ಸಿಂಗಪುರ–ಗುವಾಮ್‌, ಶುಕ್ರವಾರ ಗುವಾಮ್‌– ಹಾಂಗ್‌ಕಾಂಗ್‌ ಮತ್ತು ಶನಿವಾರ ಹಾಂಗ್‌ಕಾಂಗ್‌ ಸಿಂಗಪುರ ತಂಡಗಳು ಸೆಣಸಲಿವೆ. ಎಲ್ಲ ಪಂದ್ಯಗಳು ರಾತ್ರಿ 7ರಿಂದ ಆರಂಭವಾಗಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು