ಸೋಮವಾರ, ಸೆಪ್ಟೆಂಬರ್ 20, 2021
23 °C

ಫಾರ್ಮುಲಾ ರೇಸ್‌: ಕುಶ್‌ಗೆ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ಕುಶ್‌ ಮೈನಿ ಅವರು ಫಾರ್ಮುಲಾ ರೆನಾಲ್ಟ್‌ ಯುರೋಕಪ್‌ ಮೋಟರ್‌ ರೇಸ್‌ನ ರೂಕಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಅಬುಧಾಬಿಯ ಯಸ್‌ ಮರಿನಾ ಸರ್ಕ್ಯೂಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ರೇಸ್‌ನಲ್ಲಿ ಬೆಂಗಳೂರಿನ ಕುಶ್‌ ಈ ಸಾಧನೆ ಮಾಡಿದರು. ಇಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 102ಕ್ಕೆ ಹೆಚ್ಚಿಸಿಕೊಂಡು ಡ್ರೈವರ್‌ಗಳ ಚಾಂಪಿಯನ್‌ಷಿಪ್‌ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದರು.

ಆರನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಿದ್ದ ಕುಶ್‌, ಶುರುವಿನಲ್ಲಿ ಸೆಬಾಸ್ಟಿಯನ್‌ ಫರ್ನಾಂಡಿಸ್‌ ಅವರನ್ನು ಹಿಂದಿಕ್ಕಿದರು. ನಂತರದ ಲ್ಯಾಪ್‌ಗಳಲ್ಲಿ ಇನ್ನಷ್ಟು ವೇಗವಾಗಿ ಮೋಟರ್‌ ಕಾರು ಚಲಾಯಿಸಿ ಎಲ್ಲರ ಗಮನ ಸೆಳೆದರು.

‘ಇರುಳಿನಲ್ಲಿ ನಡೆದ ರೇಸ್‌ನಲ್ಲಿ ಇದೇ ಮೊದಲ ಸಲ ಭಾಗವಹಿಸಿದ್ದೆ. ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ’ ಎಂದು ಕುಶ್‌, ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು