ಕಿಗಾಲಿ, ರುವಾಂಡ: ಸ್ವಿಟ್ಜರ್‌ಲೆಂಡ್‌ನ ಗಿಯಾನಿ ಇನ್ಫಾಂಟಿನೊ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್‌ನ (ಫಿಫಾ) ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ಧಾರೆ.
ರುವಾಂಡದ ರಾಜಧಾನ ಕಿಗಾಲಿಯಲ್ಲಿ ಗುರುವಾರ ನಡೆದ ಫಿಫಾ ಮಹಾಸಭೆಯಲ್ಲಿ ಅವರ ಅವಿರೋಧ ಆಯ್ಕೆ ನಡೆದಿದ್ದು, 2027ರ ವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
52 ವರ್ಷದ ಇನ್ಫಾಂಟಿನೊ ಅವರು 2016 ರಲ್ಲಿ ಮೊದಲ ಬಾರಿ ಫಿಫಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸೆಪ್ ಬ್ಲಾಟರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ತುಂಬಿದ್ದರು.
ಫಿಫಾ ನಿಯಮದ ಪ್ರಕಾರ ಒಬ್ಬರಿಗೆ ತಲಾ ನಾಲ್ಕು ವರ್ಷಗಳ ಮೂರು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.