ಗವರ್ನರ್ಸ್‌ ಕಪ್‌ ಗಾಲ್ಫ್‌: ಬಸವರಾಜ್‌ ಚಾಂಪಿಯನ್‌

ಗುರುವಾರ , ಜೂನ್ 20, 2019
27 °C
ಗವರ್ನರ್ಸ್‌ ಕಪ್‌ ಗಾಲ್ಫ್‌ ಪ್ರಶಸ್ತಿ ವಿತರಣೆ

ಗವರ್ನರ್ಸ್‌ ಕಪ್‌ ಗಾಲ್ಫ್‌: ಬಸವರಾಜ್‌ ಚಾಂಪಿಯನ್‌

Published:
Updated:
Prajavani

ಬೆಂಗಳೂರು: ಜಿ.ಎನ್. ಬಸವರಾಜ್ ಅವರು  ಗವರ್ನರ್ಸ್ ಕಪ್‌ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರನ್ನರ್‌ ಅಪ್‌ ಸ್ಥಾನವನ್ನು ವೃಶಾಂಕ್‌ ಬಾಲು ಪಡೆದುಕೊಂಡರು. ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ  ನಡೆದ ಸಮಾರಂಭದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಹ್ಯಾಂಡಿಕ್ಯಾಪ್‌ 0–9 ವಿಭಾಗದಲ್ಲಿ ಸಿ. ಸುಂದರ್‌ ಪ್ರಥಮ ಸ್ಥಾನ ಗಳಿಸಿದರೆ, ಧ್ರುವ ಜೌಹಾರಿ ದ್ವಿತೀಯ ಸ್ಥಾನ ಪಡೆದರು. ಹ್ಯಾಂಡಿಕ್ಯಾಪ್‌ 10–18 ವಿಭಾಗದ ಮೊದಲ ಸ್ಥಾನ ನೀರಜ್‌ ಮಿತ್ತಲ್‌ ಅವರಿಗೆ ಒಲಿಯಿತು. ಸುನಿಲ್‌ ವಸಂತ್‌ ದ್ವಿತೀಯ ಎರಡನೇ ಸ್ಥಾನ ಪಡೆದರು.  ಹ್ಯಾಂಡಿಕ್ಯಾಪ್‌ 19–24 ವಿಭಾಗದಲ್ಲಿ ಲೋಕೇಶ್‌ ಕೃಷ್ಣ ಹಾಗೂ ಕಿಶೋರ್ ರೆಡ್ಡಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ಮಹಿಳೆಯರ ಗ್ರಾಸ್‌ ವಿಭಾಗದಲ್ಲಿ ಅನುಷ್ಕಾ ಬೊರ್ಕರ್‌ , ನೆಟ್‌ ವಿಭಾಗದಲ್ಲಿ ಧನಲಕ್ಷ್ಮೀ ಪ್ರಶಸ್ತಿ ಗೆದ್ದರು..

ರಾಜ್ಯಪಾಲ ವಜೂಭಾಯಿ ವಾಲಾ ಪ್ರಶಸ್ತಿ ವಿತರಿಸಿ ಮಾತನಾಡಿದರು. ಟೂರ್ನಿಯ ನಿರ್ದೇಶಕ ರವಿಕುಮಾರ್‌ ರಾಜು, ಕಾರ್ಯದರ್ಶಿ ಸಂಜಯ್‌ ಪೋಳ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !