ಬೆಂಗಳೂರು: ನಿಖರ ಪ್ರದರ್ಶನ ನೀಡಿದ ನೆದರ್ಲೆಂಡ್ಸ್‌ನ ಲಾರ್ಸ್ ವಾನ್ ಮೆಯೆಲ್ ಅವರು ಇಲ್ಲಿ ನಡೆಯುತ್ತಿರುವ ದಿ ಚಾಲೆಂಜ್ ಗಾಲ್ಫ್ ಟೂರ್ನಿಯ ಮೂರನೇ ಸುತ್ತಿನ ಬಳಿಕ ಮುನ್ನಡೆ ಸಾಧಿಸಿದ್ದಾರೆ.
ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಗುರುವಾರ ಅವರು 67 ಸ್ಟ್ರೋಕ್‌ಗಳಲ್ಲಿ ಸ್ಪರ್ಧೆ ಕೊನೆ ಗೊಳಿಸಿದರು. ಈ ಮೂಲಕ ಒಟ್ಟಾರೆ 199 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಮೊದಲ ಎರಡು ಸುತ್ತುಗಳಲ್ಲಿ ಅವರು ತಲಾ 66 ಸ್ಟ್ರೋಕ್‌ಗಳನ್ನು ತೆಗೆದುಕೊಂಡಿದ್ದರು.
ತಲಾ 201 ಸ್ಕೋರ್ ಹೊಂದಿರುವ ಇಂಗ್ಲೆಂಡ್‌ನ ಅಲೆಕ್ಸ್ ಫಿಟ್ಜ್‌ಪ್ಯಾಟ್ರಿಕ್ ಮತ್ತು ಸ್ವಿಟ್ಜರ್ಲೆಂಡ್‌ನ ಜೊಯೆಲ್ ಗಿರ್‌ಬ್ಯಾಕ್ ಅವರು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಇವರು ಕ್ರಮವಾಗಿ 71 ಹಾಗೂ 68 ಸ್ಟ್ರೋಕ್‌ಗಳನ್ನು ತೆಗೆದುಕೊಂಡರು.ಫ್ರಾನ್ಸ್‌ನ ಫ್ರೆಡೆರಿಕ್ ಲ್ಯಾಕ್ರೊಕ್ಸ್ ಮತ್ತು ಜರ್ಮನಿಯ ಮೈಕಲ್ ಹಿರ್ಮರ್ (202) ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಭಾರತದ ಕಾರ್ತಿಕ್ ಶರ್ಮಾ (203) ಬಳಿಕದ ಸ್ಥಾನ ಹೊಂದಿದ್ದಾರೆ. ಅವರು 70 ಸ್ಟ್ರೋಕ್‌ಗಳೊಂದಿಗೆ ಮೂರನೇ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.