ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಫೆಡರೇಷನ್‌ಗಳಿಗೆ ತಾತ್ಕಾಲಿಕ ಮಾನ್ಯತೆ

Last Updated 19 ಜೂನ್ 2020, 16:26 IST
ಅಕ್ಷರ ಗಾತ್ರ

ನವದೆಹಲಿ: ಗಾಲ್ಫ್‌, ಸ್ಕೂಲ್‌ ಗೇಮ್ಸ್‌ ಹಾಗೂ ರೋಯಿಂಗ್‌ ಫೆಡರೇಷನ್‌ಗಳಿಗೆ ತಾತ್ಕಾಲಿಕ ಮಾನ್ಯತೆ ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ತನ್ನ ಹಿಂದಿನ ನಿರ್ಧಾರವನ್ನು ಪರಿಶೀಲನೆಗೆ ಒಳಪಡಿಸಿ ಸಚಿವಾಲಯ ಈ ತೀರ್ಮಾನಕ್ಕೆ ಬಂದಿದೆ.

ಸಚಿವಾಲಯವು ದೆಹಲಿ ಹೈಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ.

ಮೇ 11ರಂದು ಕ್ರೀಡಾ ಸಚಿವಾಲಯವು 54 ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸೆಪ್ಟೆಂಬರ್‌ವರೆಗೆ ತಾತ್ಕಾಲಿಕ ಮಾನ್ಯತೆ ನೀಡಿತ್ತು. ಆದರೆ ವಿವಿಧ ಕಾರಣಗಳಿಗಾಗಿ ಭಾರತ ಗಾಲ್ಫ್‌ ಯೂನಿಯನ್‌ (ಐಜಿಯು), ಭಾರತ ಶಾಲಾ ಕ್ರೀಡಾಕೂಟಗಳ ಫೆಡರೇಷನ್‌ (ಎಸ್‌ಜಿಎಫ್‌ಐ) ಹಾಗೂ ಭಾರತ ರೋಯಿಂಗ್‌ ಫೆಡರೇಷನ್‌ಗಳನ್ನು (ಆರ್‌ಎಫ್‌ಐ) ಈ ಪ್ರಕ್ರಿಯೆಯಿಂದ ಹೊರಗಿಟ್ಟಿತ್ತು.

ಎನ್‌ಎಸ್‌ಎಫ್‌ಗಳ ಮಾನ್ಯತೆ ವಾರ್ಷಿಕವಾಗಿದ್ದರೂ, ಭಾರತ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ನರಿಂದರ್‌ ಬಾತ್ರಾ ಅವರ ಸಲಹೆಯ ಮೇರೆಗೆ ಈ ಬಾರಿ ಸೆಪ್ಟೆಂಬರ್‌ವರೆಗೆ ಮಾತ್ರ ವಿಸ್ತರಿಸಲಾಗಿದೆ.

‘ಅಮಾನತು ಅಥವಾ ತಡೆಹಿಡಿಯಲಾಗಿದ್ದ ಐಜಿಯು, ಎಸ್‌ಜಿಎಫ್‌ಐ ಹಾಗೂ ಆರ್‌ಎಫ್‌ಐನ ಮಾನ್ಯತೆಗಳನ್ನು ಮತ್ತೆ ಒದಗಿಸಲಾಗುವುದು’ ಎಂಬ ತನ್ನ ನಿರ್ಧಾರದ ಕುರಿತು ಇದೇ‌ 16ರಂದು ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಚಿವಾಲಯ ತಿಳಿಸಿದೆ.

ತನ್ನ ದೈನಂದಿನ ಖರ್ಚು–ವೆಚ್ಚಗಳಿಗೆ ಬಹುತೇಕ ಸರ್ಕಾರವನ್ನೇ ಅವಲಂಬಿಸಿದ್ದ ಸಣ್ಣ ಎನ್‌ಎಸ್‌ಎಫ್‌ಗಳಿಗೆ ಸಚಿವಾಲಯದ ಈ ನಿರ್ಧಾರ ಮಹತ್ವದ್ದೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT