ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಓಪನ್ ಶೂಟಿಂಗ್‌: ರೋಷನಿ, ಆದ್ಯಲಕ್ಷ್ಮಿ ಪಾರಮ್ಯ

ಪಿಸ್ತೂಲು ಸೀನಿಯರ್ ವಿಭಾಗದಲ್ಲಿ ಮಿಂಚಿದ ತಮಿಳುನಾಡಿನ ತಂಗರಾಜೇಶ್ವರಿ, ನವ್ಯ ಬಾನು
Last Updated 1 ಸೆಪ್ಟೆಂಬರ್ 2022, 16:16 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ರೋಷನಿ ಮತ್ತು ಆದ್ಯಲಕ್ಷ್ಮಿ ಅವರು ಮಂಗಳೂರು ರೈಫಲ್ ಕ್ಲಬ್ ಆಯೋಜಿಸಿರುವ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡಿದರು. ಕದ್ರಿಯಲ್ಲಿರುವ ಕ್ಲಬ್‌ನ ಅಂಗಣದಲ್ಲಿ ಗುರುವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನ ರೈಫಲ್ ವಿಭಾಗದ ಆರಂಭಿಕ ಸುತ್ತುಗಳಲ್ಲಿ ರೋಷನಿ ಒಟ್ಟು 601.6 ಸ್ಕೋರು ಕಲೆ ಹಾಕಿದರೆ ಆದ್ಯಲಕ್ಷ್ಮಿ 601.5 ಸ್ಕೋರು ಸಂಗ್ರಹಿಸಿದರು.

ಪಿಸ್ತೂಲು ಶೂಟಿಂಗ್‌ ಸೀನಿಯರ್ ವಿಭಾಗದಲ್ಲಿ ತಮಿಳುನಾಡಿನ ತಂಗರಾಜೇಶ್ವರಿ 359 ಮತ್ತು ನವ್ಯ ಬಾನು 352 ಸ್ಕೋರು ಗಳಿಸಿದರು. ಯೂತ್‌ ವಿಭಾಗದಲ್ಲಿ ಝಾರ ಮಾನಿಪಾಡಿ 324 ಸ್ಕೋರುಗಳೊಂದಿಗೆ ಮಿಂಚಿದರು. ಆದರೆ ಪಿಸ್ತೂಲು ಶೂಟಿಂಗ್‌ನಲ್ಲಿ ಯಾರಿಗೂ ಐಎಸ್‌ಎಸ್‌ಎಫ್‌ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ. ನ್ಯಾಷನಲ್ ರೆಕಾರ್ಡ್ ಮಟ್ಟಕ್ಕೇ ಅವರು ಸಮಾಧಾನಪಟ್ಟುಕೊಂಡರು.

ರೈಫಲ್ ಶೂಟಿಂಗ್‌ನಲ್ಲಿ ಕೇರಳದ ನವೀನ್ ವಿನೋದ್ ಮತ್ತು ತಮಿಳುನಾಡಿನ ವಿಶ್ವ ಪಿ.ಆರ್‌ ಕ್ರಮವಾಗಿ ಒಟ್ಟು 384 ಮತ್ತು 376 ಸ್ಕೋರು ಗಳಿಸಿದರೆ ಕರ್ನಾಟಕದ ವಿ.ಪ್ರಭಾಕರನ್ 372, ರಿತೇಶ್‌ 365 ಹಾಗೂ ನಜೀಮಾ ಮಾನಿಪ್ಪಾಡಿ 364 ಸ್ಕೋರುಗಳೊಂದಿಗೆ ಭರವಸೆ ಮೂಡಿಸಿದರು.

ರೈಫಲ್‌ ಶೂಟಿಂಗ್‌ನಲ್ಲಿ ಹೆಚ್ಚು ಸ್ಕೋರು ಗಳಿಸಿದ ಇತರರು: ಸ್ಕಂದ (ಕರ್ನಾಟಕ)–352, ಪ್ರಭಾಕರ್ ಎಸ್‌ (ತಮಿಳುನಾಡು)–350, (ಹೃಷಿಕೇಶ್‌ (ತಮಿಳುನಾಡು)–349, ಕಾರ್ತೀಕ (ಕರ್ನಾಟಕ)–348, ಪೂಜಿತಾ (ಕರ್ನಾಟಕ)–345, ಅನ್ಫಲ್ ದಲಾಲ್ (ಕರ್ನಾಟಕ)–345, ಶ್ರೀಲಕ್ಷ್ಮಿ (ಕರ್ನಾಟಕ)–345, ಪವನ್ (ಕರ್ನಾಟಕ)–341.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT