ಗ್ರ್ಯಾನ್‌ಪ್ರಿ ಸೈಕಲ್‌ಗೆ ಅರ್ಹತೆ ಗಳಿಸಿದ ಹಾರಿಕಾ

ರಿಗಾ, ಲಾಟ್ವಿಯಾ: ಭಾರತದ ಹಾರಿಕಾ ದ್ರೋಣವಲ್ಲಿ ಅವರು ಭಾನುವಾರ ರಾತ್ರಿ ಮುಕ್ತಾಯಗೊಂಡ ಮಹಿಳೆಯರ ಫಿಡೆ ಗ್ರ್ಯಾಂಡ್ ಸ್ವಿಡ್ ಚೆಸ್ ಟೂರ್ನಿಯಲ್ಲಿ ಐದನೇ ಸ್ಥಾನ ಗಳಿಸಿದರು.
ಕೊನೆಯ ಹಾಗೂ 11ನೇ ಸುತ್ತಿನ ಹಣಾಹಣಿಯಲ್ಲಿ ಹಾರಿಕಾ ಅವರು ಉಕ್ರೇನ್‌ನ ಮರಿಯಾ ಮುಜಿಚುಕ್ ಅವರ ಜೊತೆ ಡ್ರಾ ಮಾಡಿಕೊಂಡರು. ಐದನೇ ಸ್ಥಾನ ಗಳಿಸುವುದರೊಂದಿಗೆ ಅವರು ಮಹಿಳೆಯರ ಗ್ರ್ಯಾನ್‌ಪ್ರಿ ಸೈಕಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಗಳಿಸಿದರು.
ಹಾರಿಕಾ ಅವರು ಟೂರ್ನಿಗೆ ಬರುವಾಗ ನಾಲ್ಕನೇ ಶ್ರೇಯಾಂಕ ಹೊಂದಿದ್ದರು. ಉತ್ತಮ ಸಾಮರ್ಥ್ಯ ತೋರಿ ಒಂಬತ್ತನೇ ಸುತ್ತಿನ ಅಂತ್ಯಕ್ಕೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದರು. ಮುಜಿಚುಕ್ ಎದುರಿನ ಪಂದ್ಯದ 31ನೇ ನಡೆಯ ನಂತರ ಡ್ರಾ ಮಾಡಿಕೊಳ್ಳಲು ನಿರ್ಧರಿಸಿದರು. ಈ ಮೂಲಕ ಅವರು ಟೂರ್ನಿಯಲ್ಲಿ ಅಜೇಯರಾಗಿ ಉಳಿದರು.
ಈಚೆಗೆ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಆದ 19 ವರ್ಷದ ಅಂತಿಕಾ ಅಗರವಾಲ್ 6.5 ಪಾಯಿಂಟ್‌ಗಳೊಂದಿಗೆ 14ನೇ ಸ್ಥಾನ ಗಳಿಸಿದರು. ಏಕೈಕ ಪಂದ್ಯ ಸೋತಿದ್ದ ಅವರು ಮೂರರಲ್ಲಿ ಜಯ ಗಳಿಸಿದ್ದು ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು.
ಮುಕ್ತ ವಿಭಾಗದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ನಿಹಾಲ್ ಸರೀನ್ 6.5 ಪಾಯಿಂಟ್‌ಗಳೊಂದಿಗೆ 18ನೇ ಸ್ಥಾನ ಗಳಿಸಿದರು. ಪಿ.ಹರಿಕೃಷ್ಣ ಮತ್ತು ಶಶಿಕಿರಣ್ ಕ್ರಮವಾಗಿ 30 ಮತ್ತು 31ನೇ ಸ್ಥಾನ ಗಳಿಸಿದರು. ಸರೀನ್ ಟೂರ್ನಿಯಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಗ್ರ್ಯಾಂಡ್ ಮಾಸ್ಟರ್ ರೌನಕ್ ಸಾಧ್ವಾನಿ 5.5 ಪಾಯಿಂಟ್‌ಗಳೊಂದಿಗೆ 57ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.
ಭಾರತದ ಆಟಗಾರರ ಸಾಧನೆ (ಮಹಿಳಾ ವಿಭಾಗ)
ಆಟಗಾರ್ತಿ | ಸ್ಥಾನ | ಪಾಯಿಂಟ್ಸ್ |
ಹಾರಿಕಾ ದ್ರೋಣವಲ್ಲಿ | 5 | 7 |
ವಂತಿಕಾ ಅಗರವಾಲ್ | 14 | 6.5 |
ಆರ್.ವೈಶಾಲಿ | 29 | 5.5 |
ಪದ್ಮಿನಿ ರಾವತ್ | 44 | 4 |
ದಿವ್ಯಾ ದೇಶ್‌ಮುಕ್ | 46 | 4 |
ಮುಕ್ತ ವಿಭಾಗ
ನಿಹಾಲ್ ಸರೀನ್ | 18 | 6.5 |
ಪಿ.ಹರಿಕೃಷ್ಣ | 30 | 6.5 |
ಕೆ.ಶಶಿಕಿರಣ್ | 31 | 6 |
ರೌನಕ್ ಸಾಧ್ವಾನಿ | 57 | 5.5 |
ಅರ್ಜುನ್ ಎರಿಗೈಸಿ | 58 | 5.5 |
ಆರ್.ಪ್ರಗ್ನಾನಂದ | 75 | 5 |
ಡಿ.ಗುಕೇಶ್ | 75 | 5 |
ಎಸ್.ಪಿ.ಸೇತುರಾಮನ್ | 83 | 4.5 |
ಸೂರ್ಯಶೇಖರ್ | 88 | 4.5 |
ಬಿ.ಅಭಿದನ್ | 90 | 4.5 |
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.