ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಪಟುಗಳಿಗೆ ಆರ್ಥಿಕ ನೆರವು

ಕೋವಿಡ್‌–19: ಸಂಕಷ್ಟ ಎದುರಿಸುತ್ತಿರುವವರ ನೆರವಿಗೆ ಹಾಕಿ ಇಂಡಿಯಾ
Last Updated 18 ಆಗಸ್ಟ್ 2020, 11:21 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟಗಾರರಿಗೆ ಆರ್ಥಿಕ ನೆರವು ನೀಡಲು ಹಾಕಿ ಇಂಡಿಯಾ ಮುಂದಾಗಿದೆ. ಕ್ರೀಡಾ ಚಟುವಟಿಕೆಗೆ ಮರಳಲು ಪರದಾಟ ನಡೆಸಿರುವ 61 ಅಥ್ಲೀಟ್‌ಗಳಿಗೆ ತಲಾ ₹ 10,000 ಸಹಾಯಧನವನ್ನು ಸಂಸ್ಥೆ ನೀಡಲಿದೆ.

ಕೋವಿಡ್‌ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಹಾಕಿಪಟುಗಳಿಗೆ ಪರ್ಯಾಯ ಉದ್ಯೋಗವೂ ಇರಲಿಲ್ಲ. 30 ಮಂದಿ ಜೂನಿಯರ್‌ ಆಟಗಾರರು, 26 ಜೂನಿಯರ್‌ ಆಟಗಾರ್ತಿಯರು, ನಾಲ್ವರು ಸೀನಿಯರ್‌ ಆಟಗಾರ್ತಿಯರು ಹಾಗೂ ಒಬ್ಬ ಸೀನಿಯರ್‌ ಆಟಗಾರನಿಗೆ ಸಂಸ್ಥೆಯು ಸಹಾಯಧನ ನೀಡಲಿದೆ.

‘ಸಂಕಷ್ಟ ಎದುರಿಸುತ್ತಿರುವ ಆಟಗಾರರಿಗೆ ತಾತ್ಕಾಲಿಕ ಪರಿಹಾರಧನವಾಗಿ ತಲಾ ₹ 10,000 ನೆರವನ್ನು ಸಂಸ್ಥೆ ನೀಡಲಿದೆ. ಈ ನೆರವು ಅವರಿಗೆ ಕ್ರೀಡಾಚಟುವಟಿಕೆಗಳಿಗೆ ಮರಳಲು ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್‌ ಹೇಳಿದ್ದಾರೆ.

ಸಹಾಯಧನ ಪಡೆಯುವವರು

ಸೀನಿಯರ್‌ ಆಟಗಾರ: ನೀಲಂ ಸಂಜೀಪ್‌ ಸೆಸ್‌

ಸೀನಿಯರ್‌ ಆಟಗಾರ್ತಿ: ರಾಜ್ವಿಂದರ್‌ ಕೌರ್‌, ಶರ್ಮಿಳಾ ದೇವಿ, ಬಿಚುದೇವಿ ಕರಿಬಮ್‌, ರಶ್ಮಿತಾ ಮಿನ್ಜ್‌

ಜೂನಿಯರ್‌ ಆಟಗಾರರು: ಪ್ರಶಾಂತ್‌ ಕುಮಾರ್‌ ಚೌಹಾನ್‌, ಪವನ್‌, ಸಾಹಿಲ್‌ ಕುಮಾರ್‌ ನಾಯಕ್‌, ಸಂಜಯ್‌, ಯಶದೀಪ್‌ ಸಿವಾಚ್‌, ನಬಿನ್‌ ಕುಜುರ್‌, ಶಾರದಾನಂದ್‌ ತಿವಾರಿ, ಮೊಯಿರಂಗ್‌ದೆಮ್‌ ರವಿಚಂದ್ರ ಸಿಂಗ್‌, ಗೋಪಿ ಕುಮಾರ್‌ ಸೋಂಕರ್‌, ವಾರಿಬಮ್‌ ನೀರಜ್‌ ಕುಮಾರ್‌ ಸಿಂಗ್‌, ಗ್ರೆಗರಿ ಸೆಸ್‌, ಆಕಾಶ್‌ ದೀಪ್‌ ಸಿಂಗ್‌ ಜೂನಿಯರ್‌, ಸೂರ್ಯ ಎನ್‌.ಎಮ್‌, ಉತ್ತಮ್‌ ಸಿಂಗ್‌, ಎಸ್‌.ಕೀರ್ತಿ, ಅರಾಯ್‌ಜೀತ್‌ ಸಿಂಗ್‌ ಹುಂದಲ್‌, ಅರ್ಷದೀಪ್‌ ಸಿಂಗ್‌, ಸುಖಮನ್‌ ಸಿಂಗ್‌, ಸುದೀಪ್ ಚಿರ್ಮಾಕೊ, ಪ್ರಭ್‌ಜೋತ್‌ ಸಿಂಗ್‌, ಅಮನ್‌ದೀಪ್ ಸಿಂಗ್‌, ಮಣಿಂದರ್‌ ಸಿಂಗ್‌, ಶಿವಂ ಆನಂದ್‌.

ಜೂನಿಯರ್‌ ಆಟಗಾರ್ತಿಯರು: ರಾಷನ್‌ಪ್ರೀತ್‌ ಕೌರ್‌, ಕುಷ್ಬೂ, ಸಿಮ್ರನ್ ಸಿಂಗ್‌, ಮರೀನಾ ಲಾಲ್‌ರಾಮ್‌ಗಾಕಿ, ಇಶಿಕಾ ಚೌಧರಿ, ಜ್ಯೋತಿಕಾ ಕಾಲ್ಸಿ, ಸುಮಿತಾ, ಅಕ್ಷತಾ ದೇಖಲೆ, ಉಷಾ, ಪ್ರಣೀತ್‌ ಕೌರ್‌, ಬಲ್ಜೀತ್‌ ಕೌರ್‌, ಪ್ರೀತಿ, ಅಜ್ಮಿನಾ ಕುಜುರ್‌, ವೈಷ್ಣವಿ ಫಾಲ್ಕೆ, ಬಲ್ಜಿಂದರ್‌ ಕೌರ್‌, ಮುಮ್ತಾಜ್‌ ಖಾನ್‌, ಬ್ಯೂಟಿ ಡಂಗ್‌ಡಂಗ್‌, ದೀಪಿಕಾ, ಲಾಲ್‌ರಿಂದಿಕಿ, ಜೀವನ್‌ ಕಿಶೋರಿ ಟೊಪ್ಪೊ, ರುತುಜಾ ಪಿಸಲ್‌, ಸಂಗೀತಾ ಕುಮಾರಿ, ಯೋಗಿತಾ ಬೋರಾ, ಅನ್ನು, ಎಫ್‌. ರಾಮೆಂಗ್‌ಮಾವಿ, ಕಿರಣ್‌ದೀಪ್‌ ಕೌರ್‌, ಗುರ್ಮೈಲ್‌ ಕೌರ್‌, ಕವಿತಾ ಬಾಗ್ದಿ, ಸುಮನಾ ದೇವಿ ತೌದಮ್‌ ಹಾಗೂ ಮಹಿಮಾ ಚೌಧರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT