ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಕೊಡಗು, ಹಾಸನ ತಂಡಗಳಿಗೆ ಚಿನ್ನ

ಮಿನಿ ಒಲಿಂಪಿಕ್ಸ್: ಬ್ಯಾಸ್ಕೆಟ್‌ಬಾಲ್‌ನಲ್ಲಿ ಬೀಗಲ್ಸ್‌, ಮೌಂಟ್ಸ್ ತಂಡಗಳಿಗೆ ಪ್ರಶಸ್ತಿ
Last Updated 9 ಫೆಬ್ರುವರಿ 2020, 18:33 IST
ಅಕ್ಷರ ಗಾತ್ರ

ಬೆಂಗಳೂರು: ಜಿದ್ದಾಜಿದ್ದಿಯ ಪಂದ್ಯದಲ್ಲಿ ಶೂಟೌಟ್‌ ಮೂಲಕ ಬಳ್ಳಾರಿಯನ್ನು ಮಣಿಸಿದ ಹಾಕಿ ಕೊಡಗು ತಂಡದವರು ರಾಜ್ಯ ಮಿನಿ ಒಲಿಂಪಿಕ್ಸ್ (14 ವರ್ಷದೊಳಗಿನವರು) ಕ್ರೀಡಾಕೂಟದ ಹಾಕಿಯಲ್ಲಿ ಚಿನ್ನ ಗೆದ್ದುಕೊಂಡರು. ಬಾಲಕಿಯರ ವಿಭಾಗದ ಚಿನ್ನ ಹಾಕಿ ಹಾಸನ ಪಾಲಾಯಿತು.

ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆದ ಬಾಲಕರ ಫೈನಲ್ ಪಂದ್ಯದ ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದ್ದವು. ಕೊಡಗು ಪರ ಎರಡೂ ಗೋಲುಗಳನ್ನು ಕುಶಲ್ ಬೋಪಯ್ಯ ಗಳಿಸಿದರೆ ಬಳ್ಳಾರಿಗಾಗಿ ಕಿರಣ್ ರೆಡ್ಡಿ ಮತ್ತು ಷಣ್ಮುಖ ಚೆಂಡನ್ನು ಗುರಿ ಮುಟ್ಟಿಸಿದರು. ಶೂಟೌಟ್‌ನಲ್ಲಿ ಕೊಡಗು ಮೂರು ಗೋಲು ಗಳಿಸಿದರೆ ಬಳ್ಳಾರಿ ಒಮ್ಮೆ ಮಾತ್ರ ಚೆಂಡನ್ನು ಗುರಿ ಮುಟ್ಟಿಸಿತು.

ಇದೇ ಕ್ರೀಡಾಂಗಣದಲ್ಲಿ ನಡೆದ ಬಾಲಕಿಯರ ಫೈನಲ್‌ ಪಂದ್ಯದಲ್ಲಿ ಕೊಡಗು ತಂಡ ನಿರಾಸೆಗೆ ಒಳಗಾಯಿತು. ಪ್ರಬಲ ಹೋರಾಟ ನಡೆಸಿದ ಹಾಸನ ತಂಡ 4–1ರಲ್ಲಿ ಗೆದ್ದು ಸಂಭ್ರಮಿಸಿತು. ವಿಜಯಿ ತಂಡಕ್ಕಾಗಿ ಯಮುನಾ ಎರಡು ಗೋಲುಗಳನ್ನು ಗಳಿಸಿದರೆ ಸೌಮ್ಯಾ ಮತ್ತು ಲಕ್ಷ್ಮಿ ತಲಾ ಒಂದೊಂದು ಗೋಲು ಗಳಿಸಿದರು. ಕೊಡಗಿಗಾಗಿ ಏಕೈಕ ಗೋಲು ದೃಷ್ಟಿ ದೇಚಮ್ಮ ಅವರಿಂದ ಮೂಡಿಬಂತು.

ಬೀಗಲ್ಸ್, ಮೌಂಟ್ಸ್‌ಗೆ ಚಿನ್ನ: ಬ್ಯಾಸ್ಕೆಟ್‌ಬಾಲ್‌ನಲ್ಲಿ ಬೀಗಲ್ಸ್ ಬಾಲಕರ ತಂಡ ಮತ್ತು ಮೌಂಟ್ಸ್‌ ಬಾಲಕಿಯರ ತಂಡ ಚಿನ್ನ ಗೆದ್ದುಕೊಂಡಿತು. ಬಾಲಕರ ಫೈನಲ್‌ನಲ್ಲಿ ಬೀಗಲ್ಸ್ ತಂಡ ಜೆಎಸ್‌ಸಿ ವಿರುದ್ಧ ಜಯ ಗಳಿಸಿತು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮೌಂಟ್ಸ್ ತಂಡ ಮಂಡ್ಯದ ಡಿವೈಇಎಸ್ ಎದುರು ಗೆಲುವು ಸಾಧಿಸಿತು.

ಹ್ಯಾಂಡ್‌ಬಾಲ್‌ನಲ್ಲಿ ಚಿಕ್ಕಮಗಳೂರು ತಂಡವನ್ನು 11–8ರಲ್ಲಿ ಮಣಿಸಿದ ಚಿತ್ರದುರ್ಗ ಬಾಲಕರ ವಿಭಾಗದ ಚಿನ್ನ ಗೆದ್ದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವನ್ನು 27–9ರಲ್ಲಿ ಮಣಿಸಿದ ತುಮಕೂರು ಚಿನ್ನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT