ಬೆಂಗಳೂರು: ಸಂಘಟಿತ ಆಟವಾಡಿದ ರೇನ್‌ಬೊ ಹಾಕಿ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್‌ಎ) ಸೂಪರ್ ಡಿವಿಷನ್ ಹಾಕಿ ಟೂರ್ನಿಯಲ್ಲಿ ಜಯ ಗಳಿಸಿದರು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ರೇನ್‌ಬೊ 3-2ರಿಂದ 5ಸಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸೂರ್ಯ (15ನೇ ನಿಮಿಷ), ಕರ್ಣಶಿವ (30ನೇ ನಿ.) ಮತ್ತು ಬಾಬುಕರಣ್ (44ನೇ ನಿ.) ಗೋಲು ಗಳಿಸಿದರು.

5ಸಿ ಸ್ಪೋರ್ಟ್ಸ್ ಕ್ಲಬ್ ಪರ ಎರಡೂ ಗೋಲುಗಳನ್ನು ಅಬ್ಬಾಸ್ (16 ಮತ್ತು 39ನೇ ನಿ.) ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ವಿ.ರಾಜಾ ಹಾಕಿ ಕ್ಲಬ್ 4–2ರಿಂದ ಶ್ಲೋಕ್ ಹಾಕಿ ಕ್ಲಬ್ ಎದುರು ಗೆದ್ದಿತು. ವಿ.ರಾಜಾ ತಂಡಕ್ಕಾಗಿ ನೀರಜ್ (20ನೇ ನಿ.), ಗುರುಪ್ರೀತ್ (36 ಮತ್ತು 40ನೇ ನಿ.) ಮತ್ತು ದೀಪಕ್ (46ನೇ ನಿ.) ಗೋಲು ದಾಖಲಿಸಿದರು.

ಶ್ಲೋಕ್ ತಂಡಕ್ಕಾಗಿ ಯಶವಂತ್ (23ನೇ ನಿ.) ಮತ್ತು ಸುಗನ್ (27ನೇ ನಿ.) ಗೋಲು ಹೊಡೆದರು.

ಭಾನುವಾರ ನಡೆಯುವ ಪಂದ್ಯದಲ್ಲಿ 5ಸಿ ಸ್ಪೋರ್ಟ್ಸ್– ಜೆಎಫ್‌ಎಚ್‌ಎ ಸೆಣಸಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.