ಗುರುವಾರ , ಏಪ್ರಿಲ್ 9, 2020
19 °C

ಸದರ್ನ್‌ ಕಮಾಂಡ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸದರ್ನ್‌ ಕಮಾಂಡ್‌ ತಂಡವು ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.  ಕೆ.ಎಂ.ಕಾರ್ಯಪ್ಪ ಹಾಕಿ ಅರೇನಾದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡವು 2–1ರಿಂದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವನ್ನು ಸೋಲಿಸಿತು.

ವಿಜೇತ ತಂಡದ ಪರ ಎಂ.ಡಿ. ಅಲಿಶಾನ್‌ 8ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಮಣಿ ಸಿಂಗ್‌ 32ನೇ ನಿಮಿಷ ಗೋಲು ಹೊಡೆದು ಗೆಲುವಿನಲ್ಲಿ ಕಾಣಿಕೆ ನೀಡಿದರು. ಸೋತ ಸಾಯ್‌ ತಂಡದ ಏಕೈಕ ಗೋಲು ಮೊಹಮ್ಮದ್‌ ರಾಹೀಲ್‌ ಮೂಲಕ ಬಂತು. ಟ್ರೋಫಿ ಗೆದ್ದ ತಂಡವು ₹ 40,000 ಜೇಬಿಗಿಳಿಸಿದರೆ, ರನ್ನರ್‌ಅಪ್‌ ಸಾಯ್‌ ₹ 30,000 ಪಡೆಯಿತು.

ಸದರ್ನ್‌ ಕಮಾಂಡ್‌ ತಂಡದ ಎಂ.ಡಿ.ಅಲಿಶಾನ್‌ ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು