ಕೆಎಸ್‌ಎಚ್‌ಎ ‘ಎ’ ಡಿವಿಷನ್ ಹಾಕಿ : ಗುರು ಹಾಕಿ ಕ್ಲಬ್‌ಗೆ ಗೆಲುವು

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಗುರು ಹಾಕಿ ಕ್ಲಬ್ ತಂಡದವರು ಕೆಎಸ್‌ಎಚ್‌ಎ ‘ಎ’ ಡಿವಿಷನ್ ಹಾಕಿ ಲೀಗ್‌ನಲ್ಲಿ ಗೆದ್ದರು.
ಗುರುವಾರ ನಡೆದ ಪಂದ್ಯದಲ್ಲಿ ಗುರು ಹಾಕಿ ಕ್ಲಬ್ 4–1 ಗೋಲುಗಳಿಂದ ಬಾಂಬರ್ಸ್ ಹಾಕಿ ಕ್ಲಬ್ ತಂಡವನ್ನು ಮಣಿಸಿತು.
ವಿಜಯಿ ತಂಡದ ಪರ ಕೊಗೇಶ್ವರ್ (53 ಮತ್ತು 58ನೇ ನಿ.) ಎರಡು ಗೋಲುಗಳನ್ನು ತಂದಿತ್ತರೆ, ಗಂಗಾಧರ್ ರೆಡ್ಡಿ ಮತ್ತು ವಿಷ್ಣು ಯಾದವ್ ತಲಾ ಒಂದು ಗೋಲು ಗಳಿಸಿದರು.
ಬಾಂಬರ್ಸ್ ತಂಡಕ್ಕೆ ಮಯೂರ್ ಬೋಪಯ್ಯ ಅವರು ಮೂರನೇ ನಿಮಿಷದಲ್ಲಿ ಗೋಲು ತಂದಿತ್ತರು.
ಇನ್ನೊಂದು ಪಂದ್ಯದಲ್ಲಿ ರಾಯಚೂರಿನ ಯಂಗ್‌ಸ್ಟಾರ್ ಹಾಕಿ ಕ್ಲಬ್ ತಂಡ 3–0 ಗೋಲುಗಳಿಂದ ಎಚ್‌ಎಂಟಿ ವಿರುದ್ಧ ಜಯಿಸಿತು.
ಶುಕ್ರವಾರ ನಡೆಯುವ ಪಂದ್ಯದಲ್ಲಿ ಗುರು ಹಾಕಿ ಕ್ಲಬ್ ಮತ್ತು ರೈಸಿಂಗ್ ಸ್ಟಾರ್ ಹಾಕಿ ಕ್ಲಬ್ ತಂಡಗಳು ಎದುರಾಗಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.