ಶುಕ್ರವಾರ, ಜೂನ್ 5, 2020
27 °C

ಗಾಲ್ಫ್‌: ಪಾರ್ಕ್‌ಗೆ ಗೆಲುವಿನ ಸಂಭ್ರಮ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಸೋಲ್ : ಪಾರ್ಕ್ ಹ್ಯೂನ್ ಕ್ಯುಂಗ್ ಅವರು ದಕ್ಷಿಣ ಕೊರಿಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಕೆಎಲ್‌ಪಿಜಿಎ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಕೊರೊನಾ ಹಾವಳಿಯಿಂದಾಗಿ ಡಿಸೆಂಬರ್‌ ನಂತರ ನಡೆದ ಮೊದಲ ಟೂರ್ನಿಯಾಗಿತ್ತು ಇದು.

ಶನಿವಾರ ಸಂಜೆ ವೇಳೆ ಲಿಮ್ ಹೀ ಜಾಂಗ್ ಮತ್ತು ಬೇ ಸ್ಯಾನ್ ವೂ ಕ್ರಮವಾಗಿ ಅಗ್ರ ಎರಡು ಸ್ಥಾನಗಳಲ್ಲಿದ್ದರು. ಭಾನುವಾರ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡರು. ಯಾಂಗ್ಜುವಿನ ಲೇಕ್‌ವುಡ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಟೂರ್ನಿ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ.

ಪ್ರಶಸ್ತಿಗೆ ಮುತ್ತಿಕ್ಕಿದ ನಂತರ ಪಾರ್ಕ್ ಅವರು ತಂದೆಯನ್ನು ಅಪ್ಪಿಕೊಂಡು ಭಾವುಕರಾದರು. ‘ಕಳೆದ ವರ್ಷ ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಾಗದ್ದಕ್ಕೆ ತುಂಬ ಬೇಸರವಾಗಿತ್ತು. ಮುಂದಿನ ಟೂರ್ನಿಗಳಲ್ಲಿ ಸುಲಭವಾಗಿ ಜಯ ಗಳಿಸಲು ಈ ಗೆಲುವು ಪ್ರೇರಣೆಯಾಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು