ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ ಡಾಲರ್ಗಳಲ್ಲಿ ₹ 15 ಕೋಟಿಯ ಮೌಲ್ಯ ಎಷ್ಟಾಗುತ್ತದೆಯೆಂದೇ ತಮಗೆ ತಿಳಿದಿಲ್ಲ ಎಂದು ಕಿವೀಸ್ ತಂಡದ ಆಲ್ರೌಂಡರ್ ಕೈಲ್ ಜೆಮಿಸನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೈಲ್ ಜೆಮಿಸನ್ ಅವರನ್ನು ₹ 15 ಕೋಟಿಗೆ (2 ಮಿಲಿಯನ್ ನ್ಯೂಜಿಲೆಂಡ್ ಡಾಲರ್)ಖರೀದಿಸಿದೆ. 6.8 ಅಡಿ ಎತ್ತರದ ಕೈಲ್ ಅವರು ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ವು ಬಿಡ್ ಮೌಲ್ಯ ಪಡೆದ ನ್ಯೂಜಿಲೆಂಡ್ ಆಟಗಾರನಾಗಿದ್ದಾರೆ. ಒಟ್ಟಾರೆ ನಾಲ್ಕನೇ ಆಟಗಾರನೂ ಹೌದು.

’ಬಿಡ್ ನಡೆದ ಸಮಯದಲ್ಲಿ ಇಲ್ಲಿ ಮಧ್ಯರಾತ್ರಿಯಾಗಿತ್ತು. ನಿದ್ದೆಯಿಂದ ಎದ್ದು ಫೋನ್ ಪರಿಶೀಲಿಸಿದೆ. ಶೇನ್ ಬಾಂಡ್ (ನ್ಯೂಜಿಲೆಂಡ್ ಮಾಜಿ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್) ಸಂದೇಶ ಕಳಿಸಿದ್ದರು. ಅದರಲ್ಲಿ ನಾನು ಬಿಡ್ ಆದ ಪ್ರತಿಯೊಂದು ಹಂತಗಳ ಸಂದೇಶವೂ ಇತ್ತು‘ ಎಂದು ಜೆಮಿಸನ್ ವಿವರಿಸಿದರು.

’ಆ ಸಂದರ್ಭವು ಸಂತಸ ನೀಡಿತು. ಆದರೆ ಭಾರತೀಯ ಹಣದ ಮೊತ್ತವನ್ನು ನಮ್ಮ ಕರೆನ್ಸಿಯಲ್ಲಿ ಪರಿವರ್ತಿಸಿ ಹೇಳುವುದು ಹೇಗೆಂದು ಹೊಳೆಯಲಿಲ್ಲ‘ ಎಂದರು.

ಹೋದ ವರ್ಷ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೈಲ್ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.