ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಬಾಂಬೆ–ಗುಜರಾತ್ ‘ಬಿಗ್‌ ಬೌಟ್‌’ಗೆ ಸಜ್ಜು

Last Updated 18 ಡಿಸೆಂಬರ್ 2019, 19:40 IST
ಅಕ್ಷರ ಗಾತ್ರ

ನವದೆಹಲಿ (): ಗುಜರಾತ್ ಜೈಂಟ್ಸ್ ಮತ್ತು ಬಾಂಬೆ ಬುಲೆಟ್ಸ್ ತಂಡಗಳು ಬಿಗ್‌ ಬೌಟ್ ಇಂಡಿಯಾ ಬಾಕ್ಸಿಂಗ್ ಲೀಗ್‌ನ ಸೆಮಿಫೈನಲ್‌ನಲ್ಲಿ ಗುರುವಾರ ಸೆಣಸಲಿವೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅಮಿತ್ ಪಂಗಲ್ ಅವರ ಬಲದೊಂದಿಗೆ ಗುಜರಾತ್ ತಂಡ ಕಣಕ್ಕೆ ಇಳಿಯಲಿದೆ. ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬೌಟ್‌ಗಳು ನಡೆಯಲಿವೆ.

ಲೀಗ್ ಹಂತದ ಹಣಾಹಣಿಯಲ್ಲಿ ಜೈಂಟ್ಸ್‌ ವಿರುದ್ಧ ಬುಲೆಟ್ಸ್‌ 4–3ರಲ್ಲಿ ಗೆಲುವು ಸಾಧಿಸಿತ್ತು. ಆದರೆ ಆಗ ಅಮಿತ್ ಪಂಗಲ್ ಮತ್ತು ಮಹಿಳಾ ವಿಭಾಗದ ಮಾಜಿ ವಿಶ್ವ ಚಾಂಪಿಯನ್ ಎಲ್‌.ಸರಿತಾ ದೇವಿ ಆಡಿರಲಿಲ್ಲ.

ಅಮಿತ್ ಮತ್ತು ಸರಿತಾ ದೇವಿ ಲೀಗ್‌ನಲ್ಲಿ ಈವರೆಗೆ ಸೋಲು ಕಂಡಿಲ್ಲ. ಹೀಗಾಗಿ ನಾಲ್ಕರ ಘಟ್ಟದ ಹಣಾಹಣಿಯಲ್ಲೂ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ. 57 ಕೆಜಿ ವಿಭಾಗದಲ್ಲಿ ಯುವ ಆಟಗಾರ್ತಿ ಪೂನಂ ಪೂನಿಯಾ ಕೂಡ ಭರವಸೆ ಮೂಡಿಸಿದ್ದಾರೆ.

ಬುಲೆಟ್ಸ್ ತಂಡದ ಬಾಕ್ಸರ್‌ಗಳಿಗೆ ಹೆಚ್ಚು ಮಿಂಚಲು ಆಗಲಿಲ್ಲ. ಆ ತಂಡದಲ್ಲಿ ನವೀನ್ ಬೂರಾ ಒಬ್ಬರೇ ಈ ವರೆಗೆ ಸ್ಥಿರ ಸಾಮರ್ಥ್ಯ ತೋರಿದ್ದಾರೆ. ಒಟ್ಟು ಐದು ಬೌಟ್‌ಗಳಲ್ಲಿ ನಾಲ್ಕನ್ನು ಗೆದ್ದುಕೊಂಡಿದ್ದಾರೆ. ನಾಯಕಿ ಇಂಗ್ರಿತ್ ಲೊರೆನಾ ವೆಲೆನ್ಸಿಯಾ (51 ಕೆಜಿ), ಕವಿಂದರ್ ಸಿಂಗ್ ಬಿಷ್ಠ್ (57 ಕೆಜಿ) ಮತ್ತು ಇಮ್ಯಾನ್ಯುಯೆಲ್ ರೆಯಾಸ್ (91 ಕೆಜಿ) ಅವರು ಸೆಮಿಫೈನಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಈ ಮೂವರೂ ತಲಾ ಮೂರು ಬೌಟ್‌ಗಳನ್ನು ಗೆದ್ದಿದ್ದಾರೆ.

ಮಹಿಳೆಯರ 60 ಕೆಜಿ ವಿಭಾಗದಲ್ಲಿ ಬುಲೆಟ್ಸ್ ಈ ವರೆಗೆ ಒಂದು ಪಾಯಿಂಟ್ ಕೂಡ ಗಳಿಸಲಿಲ್ಲ. ಮೆಲಿಸಾ ನಿಯೋಮಿ, ಗೊನ್ಸಾಲೆಸ್ ಮತ್ತು ಮೋನಿಕಾ ಸತತ ವೈಫಲ್ಯ ಕಂಡಿದ್ದಾರೆ. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಯುವ ಬಾಕ್ಸರ್ ಪ್ರಿಯಾ ಕೂಡ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ಗುಜರಾತ್ ಲಯನ್ಸ್‌ ತಂಡ ರಾಜೇಶ್ ನರ್ವಾಲ್ ಮೇಲೆ ಮಾತ್ರ ಭರವಸೆ ಕಳೆದುಕೊಂಡಿದೆ. 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ರಾಜೇಶ್ ಮೊದಲ ಬೌಟ್‌ಮಲ್ಲಿ ಒಡಿಶಾ ವಾರಿಯರ್ಸ್‌ನ ಸವಿತಾ ವಿರುದ್ಧ ಗೆದ್ದ ನಂತರ ಒಂದೇ ಒಂದು ಜಯ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT