ಸರಬಯಾ, ಇಂಡೊನೇಷ್ಯಾ : 17 ಹಾಗೂ 15 ವರ್ಷದೊಳಗಿನವರ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಬುಧವಾರ ಆರಂಭಗೊಳ್ಳಲಿದ್ದು,ಭಾರತದ ಯುವ ಆಟಗಾರರು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದ್ದಾರೆ.

ಹೋದ ವರ್ಷ ಮ್ಯಾನ್ಮಾರ್‌ನಲ್ಲಿ ನಡೆದ ಟೂರ್ನಿಯಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ ಒಲಿದಿತ್ತು. ಗುಜರಾತ್‌ನ ತಸ್ನಿಂ ಮಿರ್– ತೆಲಂಗಾಣದ ಮೇಘನಾ ರೆಡ್ಡಿ ಜೋಡಿಯು 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.

ತಸ್ನಿಂ ಮಿರ್ ಅವರಿಗೆ15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ದೊರೆತಿದೆ. ಐದು ದಿನಗಳವರೆಗೆ ಟೂರ್ನಿ ನಡೆಯಲಿದೆ.

ಮಹಾರಾಷ್ಟ್ರದ ವರುಣ್ ಕಪೂರ್ ಮತ್ತು ಅಸ್ಸಾಂನ ತನ್ಮಯ್ ಬೋರಾ ಅವರು ಕ್ರಮವಾಗಿ 17 ವರ್ಷದೊಳಗಿನವರು ಹಾಗೂ 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾರತದ ನಂ.1 ಆಟಗಾರನಾಗಿರುವ ಪ್ರಣವ್ ರಾವ್ ಗಂಧಮ್, ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಮಾನಸಿ ಸಿಂಗ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.