ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: 4X400 ಮೀ. ಮಿಶ್ರ ರಿಲೆ ಫೈನಲ್‌ಗೆ ಭಾರತ

Last Updated 18 ಆಗಸ್ಟ್ 2021, 12:42 IST
ಅಕ್ಷರ ಗಾತ್ರ

ನೈರೋಬಿ: ಕರ್ನಾಟಕದ ಪ್ರಿಯಾ ಮೋಹನ್ ಅವರನ್ನೊಳಗೊಂಡ ಭಾರತದ ತಂಡವು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4X400 ಮೀ. ಮಿಶ್ರ ರಿಲೆ ವಿಭಾಗದಲ್ಲಿ ಫೈನಲ್‌ ತಲುಪಿದೆ.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ತಾನು ಸ್ಪರ್ಧಿಸಿದ್ದ ಹೀಟ್ಸ್‌ನಲ್ಲಿ ಭಾರತ ತಂಡವು ಮೊದಲ ಸ್ಥಾನ ಗಳಿಸಿತು.

ಅಬ್ದುಲ್‌ ರಜಾಕ್‌, ಪ್ರಿಯಾ, ಸಮ್ಮಿ ಹಾಗೂ ಕಪಿಲ್ ಅವರಿದ್ದ ತಂಡವು ಒಟ್ಟಾರೆ ಎರಡನೇ ಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿತು. ಕೂಟ ದಾಖಲೆಯ ಮೂರು ನಿಮಿಷ 23.36 ಸೆಕೆಂಡುಗಳಲ್ಲಿ ತಂಡವು ಗುರಿ ತಲುಪಿತ್ತು. ಆದರೆ ಈ ದಾಖಲೆ ಹೆಚ್ಚು ಹೊತ್ತು ಉಳಿಯಲಿಲ್ಲ.

ಎರಡನೇ ಹೀಟ್ಸ್‌ನಲ್ಲಿ ಸ್ಪರ್ಧಿಸಿದ್ದ ನೈಜಿರೀಯಾ ತಂಡದವರು ಮೂರು ನಿಮಿಷ 21.66 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸೀಮಾ ಅಂಟಿಲ್‌ (ಡಿಸ್ಕಸ್‌ ಥ್ರೊ, 2002), ನವಜೀತ್ ಕೌರ್ ದಿಲ್ಲೋನ್‌ (ಡಿಸ್ಕಸ್ ಥ್ರೊ, 2014), ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ (ಜಾವೆಲಿನ್ ಥ್ರೊ, 2016) ಮತ್ತು ಹಿಮಾ ದಾಸ್‌ (400 ಮೀ. ಓಟ, 2018) ಪದಕಗಳನ್ನು ಗೆದ್ದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT