ಸೂಪರ್‌ಬೆಟ್ ರ‍್ಯಾಪಿಡ್ ಚೆಸ್: ಆನಂದ್ ಶುಭಾರಂಭ

ವಾರ್ಸಾ: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಗುರುವಾರ ಆರಂಭವಾದ ಸೂಪರ್‌ಬೆಟ್ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಪೊಲೆಂಡ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ವೈಲ್ಡ್‌ಕಾರ್ಡ್ ಪ್ರವೇಶ ಗಿಟ್ಟಿಸಿರುವ ಮಾಜಿ ವಿಶ್ವ ಚಾಂಪಿಯನ್ ಆನಂದ್, ಮೊದಲ ಸುತ್ತಿನಲ್ಲಿ ಪೊಲೆಂಡ್‌ನ ರಾಡೊಸ್ಲಾವ್ ವೊಟಾಸೆಚ್ ವಿರುದ್ಧ ಜಯಿಸಿದರು.
ನಂತರದ ಅವರು ಅಮೆರಿಕದ ವೆಸ್ಲೆ ಸೋ ಹಾಗೂ ಉಕ್ರೇನ್‌ನ ಆ್ಯಂಟೊನ್ ಕೊರೊಬೊವ್ ವಿರುದ್ಧವೂ ಗೆದ್ದು ಮೊದಲ ದಿನದಾಟ ಮುಗಿಸಿದರು. 10 ಆಟಗಾರರು ಪಾಲ್ಗೊಂಡಿರುವ ಟೂರ್ನಿಯಲ್ಲಿ ಮುನ್ನಡೆ ಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.