ಶುಕ್ರವಾರ, ಸೆಪ್ಟೆಂಬರ್ 25, 2020
25 °C

ಹಾಕಿ ಆಟಗಾರ ಮನ್‌ದೀಪ್‌ ಸಿಂಗ್‌ಗೆ ಕೋವಿಡ್ ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

Mandeep Singh

ನವದೆಹಲಿ: ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಿಳಿಸಿದೆ.

ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇತರ ಐವರು ಸೋಂಕಿತ ಆಟಗಾರರೊಂದಿಗೆ ಬೆಂಗಳೂರಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಾಧಿಕಾರ ಹೇಳಿದೆ. ಬೆಂಗಳೂರಿನ ಎಸ್‌ಎಐ ಕೇಂದ್ರದಲ್ಲಿ ರಾಷ್ಟ್ರೀಯ ಶಿಬಿರವು ಆಗಸ್ಟ್ 20ರಿಂದ ಆರಂಭವಾಗಬೇಕಿದೆ.

‘ಬೆಂಗಳೂರಿನಲ್ಲಿರುವ ಎಸ್‌ಎಐ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿರುವ ಇತರ 20 ಆಟಗಾರರ ಜತೆ ಭಾರತದ ಪುರುಷರ ಹಾಕಿ ತಂಡದ ಆಟಗಾರ ಮನ್‌ದೀಪ್ ಅವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ. ಆದರೆ ಅವರಿಗೆ ರೋಗ ಲಕ್ಷಣಗಳಿಲ್ಲ’ ಎಂದು ಎಸ್‌ಎಐ ಪ್ರಕಟಣೆ ತಿಳಿಸಿದೆ.

ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಇತರ ನಾಲ್ವರು ಆಟಗಾರರಿಗೆ ಕೋವಿಡ್ ತಗುಲಿರುವುದು ಕಳೆದ ವಾರ ದೃಢಪಟ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು